Publish Date: Fri, 09 Jul 2021 (14:00 IST)
Updated Date: Fri, 09 Jul 2021 (14:07 IST)
ನಿಮಗೆ ಯಾವಾಗ ಅಂದರೆ ಅವಾಗ ಕಣ್ಣೀರು ಬರುತ್ತಲ್ಲಾ ಕುಮಾರಣ್ಣ. ನೀವು ಯಾವ ನಟನಿಗೂ ಕಡಿಮೆ ಇಲ್ಲ ಕುಮಾರಣ್ಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಹಿರಿಯ ನಟ ದೊಡ್ಡಣ್ಣ ಕುಟುಕಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಮೊದಲು ಚಿತ್ರರಂಗದಿಂದಲೇ ಬಂದಿದ್ದು ಎಂಬುದು ನೆನಪಿಲ್ಲವೇ? ನಿಮ್ಮ ಮನೆಯಲ್ಲೂ ಚಿತ್ರರಂಗದವರು ಇಲ್ಲವೇ? ಇಷ್ಟಿದ್ದು ಚಿತ್ರರಂಗದವರ ಬಗ್ಗೆ ಮಾತಾನಾಡ್ತಿರಲ್ಲ ಎಂದರು.
ಮೊದಲು ನಿಮ್ಮ ತಪ್ಪು ತಿದ್ದಿಕೊಳ್ಳಿ. ಪದೇಪದೆ ತಪ್ಪು ಮಾಡಬೇಡಿ. ನೀವು ಯಾವಾಗ ಅಂದರೆ ಅವಾಗ ಕಣ್ಣೀರು ಹಾಕುವುದಿಲ್ಲವೇ? ಹೇಗೆ ಬರುತ್ತೆ ನಾಟಕದ ಕಣ್ಣೀರು ಕುಮಾರಣ್ಣ ಎಂದು ದೊಡ್ಡಣ್ಣ ಪ್ರಶ್ನಿಸಿದರು.