Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಯೋಗೀಶ್‌ಗೌಡ ಕೊಲೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಸಿಬಿಐ ಗೆ ಸುಪ್ರೀಂ ನೋಟಿಸ್

webdunia
ಶುಕ್ರವಾರ, 9 ಜುಲೈ 2021 (13:53 IST)
ಬೆಂಗಳೂರು:  ಬಿಜೆಪಿ ಸದಸ್ಯನ ಕೊಲೆ ಆರೋಪದಲ್ಲಿ ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿಯ ಜಾಮೀನು ಅರ್ಜಿಯ ಸಂಭಂಧ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
 
ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್‌ಗೌಡ  ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 2020 ರ ನವೆಂಬರ್ 5 ರಂದು ಬಂಧಿಸಲ್ಪಟ್ಟಿದ್ದ ಕರ್ನಾಟಕದ ಮಾಜಿ ಸಚಿವ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಜಾಮೀನು ಅರ್ಜಿಯ ಸಂಭಂಧ ಸುಪ್ರೀಂ ಕೋರ್ಟ್ ಕೇಂದ್ರ ತನಿಖಾ ಸಂಸ್ಥೆ ಮತ್ತು ಕರ್ನಾಟಕ ರಾಜ್ಯಕ್ಕೆ ಗುರುವಾರ ನೋಟಿಸ್ ನೀಡಿದೆ.
 
 ನ್ಯಾಯಮೂರ್ತಿ ಯು.ಯು.ಲಲಿತ್, ಅಜಯ್ ರಾಸ್ತೋಗಿ ಮತ್ತು  ಅನಿರುದ್ಧ ಬೋಸ್ ಒಳಗೊಂಡ ನ್ಯಾಯಪೀಠ ಸಿಬಿಐ ಮತ್ತು ಕರ್ನಾಟಕ ರಾಜ್ಯಕ್ಕೆ ನೋಟಿಸ್ ನೀಡಿ 2021 ರ ಜುಲೈ 20 ರಂದು ಅಥವಾ ಅದಕ್ಕೂ ಮೊದಲು ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ನಿರ್ದೇಶನ ನೀಡಿದೆ.
 
ಕರ್ನಾಟಕದ ಮಾಜಿ ಸಚಿವ ವಿನಯ್ ಕುಲಕರ್ಣಿ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟ್ಗಿ ವಾದ ಮಂಡಿಸಿ ಕರ್ನಾಟಕ ಹೈಕೋರ್ಟ್ ತೀರ್ಪಿನ 20 ಮತ್ತು 23 ನೇ ಪ್ಯಾರಾಗ್ರಾಫ್ ನಲ್ಲಿ ಕುಲಕರ್ಣಿಯನ್ನು ಯಾವುದೇ ರೀತಿಯಲ್ಲಿ ಒಳಗೊಂಡಿಲ್ಲ ಎಂದು ಅರ್ಜಿ ಸಲ್ಲಿಸಿದ್ದರು.  ಕುಲಕರ್ಣಿ ಮತ್ತು ಎ 1 ಆರೋಪಿಯ ನಡುವೆ ಹಲವಾರು ಕರೆಗಳು ರಾಜಕೀಯ ಸಂಪರ್ಕ ಮತ್ತು ಪರಿಚಯದಿಂದ ಮಾಡಿರುವುದು ಎಂದು ಜಡ್ಜ್ ಮುಂದೆ ಹೇಳಿದ್ದಾರೆ.
 
 ಎ 1 ಇಂದ ಎ 6 ಆರೋಪಿಗಳವರೆಗೆ ಈಗಾಗಲೇ ಜಾಮೀನು ನೀಡಲಾಗಿದೆ.  ಆರೋಪಿತ 7 ಮಂದಿಗೆ ಜಾಮೀನು ನೀಡಲಾಗಿದೆ ಎಂದು ಹಿರಿಯ ವಕೀಲ ಮುಕುಲ್ ರೋಹಟ್ಗಿ  ವಾದಿಸಿದ್ದಾರೆ.
 
 
ಪ್ರಕರಣದ ಹಿನ್ನಲೆ:
 
ಹೆಬ್ಬಳ್ಳಿ ಕ್ಷೇತ್ರದ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಗೌಡರ್ ರನ್ನು 2016 ರ ಜೂನ್ 15 ರಂದು ಧಾರವಾಡದ ಸಪ್ತಾಪುರದ ಜಿಮ್‌ನಲ್ಲಿ ಶಸ್ತ್ರಸಜ್ಜಿತ ಗ್ಯಾಂಗ್ ಹತ್ಯೆ ಮಾಡಿತ್ತು.
 
ಕೊಲೆಯ ನಂತರ, ಧಾರವಾಡ ಪೊಲೀಸರು ಆರು ಜನರನ್ನು ಬಂಧಿಸಿ ಕೊಲೆ ಆರೋಪ ಹೊರಿಸಿದ್ದರು.
 
 ಬಿಜೆಪಿ ನಾಯಕರ ಬೆಂಬಲವಿರುವ ಯೋಗೀಶ್‌ಗೌಡ  ಸಹೋದರ ಗುರುನಾಥ ಗೌಡರ್ ಈ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಒತ್ತಾಯಿಸಿದ್ದರು. ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಅಂತಿಮವಾಗಿ ಸಿಬಿಐ ತನಿಖೆಗೆ ನೀಡಲಾಯಿತು.
 
ಸಿಬಿಐ 2019 ರ ಸೆಪ್ಟೆಂಬರ್ 24 ರಂದು ತನಿಖೆಯನ್ನು ವಹಿಸಿಕೊಂಡಿದ್ದು, ಎಂಟು ಆರೋಪಿಗಳನ್ನು ಗುರುತಿಸಿ ಬಂಧಿತ್ತು. ಪ್ರಕರಣದ ಸಂಬಂಧ 2020 ರ ಮೇ 20 ರಂದು ಚಾರ್ಜ್‌ಶೀಟ್ ಸಲ್ಲಿಸಿತ್ತು.
 
ವಿನಯ್ ಕುಲಕರ್ಣಿಯನ್ನು 2020 ರ ನವೆಂಬರ್ 5 ರಂದು ಬಂಧಿಸಲಾಗಿದ್ದು ಮತ್ತು ಬೆಳಗಾವಿಯ ಹಿಂಡಲಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿಡಲಾಗಿದೆ. ವಿನಯ್ ಕುಲಕರ್ಣಿ ಜಾಮೀನು ಅರ್ಜಿಯನ್ನು ಎರಡು ಬಾರಿ ತಿರಸ್ಕರಿಸಲಾಗಿದೆ, ಮೊದಲು ಜಿಲ್ಲಾ ನ್ಯಾಯಾಲಯ ಮತ್ತು ನಂತರ ಹೈಕೋರ್ಟ್ ತಿರಸ್ಕರಿಸಿವೆ.
 
 2021 ರ ಫೆಬ್ರವರಿಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಪೂರಕ ಚಾರ್ಜ್‌ಶೀಟ್ ಒಂದನ್ನು ಸಲ್ಲಿಸಿತ್ತು. ಮುಂದಿನ ವಿಚಾರಣೆಯನ್ನು  2021 ಜುಲೈ 26 ರಂದು ಕೈಗೆತ್ತಿಕೊಳ್ಳಲಾಗುವುದು ಎಂದು ಕೋರ್ಟ್ ತಿಳಿಸಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಅನಂತಕುಮಾರ್‌ ಪ್ರತಿಷ್ಠಾನದ ವತಿಯಿಂದ ಭಾರತೀಯ ಔಷಧ ವಲಯದ ಸಮಸ್ಯೆಗಳೂ ಹಾಗೂ ಅವಕಾಶಗಳ ಬಗ್ಗೆ ವೆಬಿನಾರ್‌