Select Your Language

Notifications

webdunia
webdunia
webdunia
webdunia

ಎತ್ತುಗಳ ಮಣ್ಣಿನ ಮೂರ್ತಿ ಪೂಜಿಸಿ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ

ಎತ್ತುಗಳ ಮಣ್ಣಿನ ಮೂರ್ತಿ ಪೂಜಿಸಿ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ
bangalore , ಶುಕ್ರವಾರ, 9 ಜುಲೈ 2021 (13:45 IST)
ಉತ್ತರ ಕರ್ನಾಟಕ ಭಾಗದ ರೈತರ ಹಬ್ಬ ಮಣ್ಣೆತ್ತಿನ ಅಮವಾಸ್ಯೆಯಾಗಿದೆ. ಮಣ್ಣೆತ್ತಿನ ಅಮವಾಸ್ಯೆ ಹಿನ್ನೆಲೆಯಲ್ಲಿ ಗದಗನ ಮಾರುಕಟ್ಟೆಗಳಲ್ಲಿ ಎತ್ತುಗಳ ಮಣ್ಣಿನ ಮೂರ್ತಿಗಳನ್ನ ಖರೀದಿ ಭರ್ಜರಿಯಾಗಿದೆ ನಡೆಯುತ್ತಿದೆ. ಹೌದು ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟ ಅನುಭವಿಸಿದ್ರೂ ಸಂಪ್ರದಾಯ ಬಿಡದ ರೈತಾಪಿ ವರ್ಗ ಅಮವಾಸ್ಯೆಯ ಸಖತಾಗಿ ಆಚರಣೆ ಮಾಡುತ್ತಿದ್ದಾರೆ. ಎತ್ತುಗಳ ಮೂರ್ತಿಗಳನ್ನ ಮನೆಗೆ ತಂದು ಪೂಜಿಸೋ ಮೂಲಕ ವಿಶೇಷವಾಗಿ ಆಚರಣೆ ಮಾಡತ್ತಾರೆ. ಎತ್ತಿನ ಮೂರ್ತಿಗಳನ್ನು ತಂದು ಸಡಗರದಿಂದ ಪೂಜಿಸುವ ಮೂಲಕ ಮಣ್ಣೆತ್ತಿನ ಅಮವಾಸ್ಯೆ ಹಬ್ಬ ಆರಚಣೆ ಮಾಡತ್ತಾರೆ. ಇನ್ನು ಮಳೆಯಿಂದ ಬಿತ್ತನೆ ಮಾಡಿದ ಫಸಲು ಸಮೃದ್ಧಯಾಗಿ ಬರಲಿ ಎಂದು ರೈತರು ಪ್ರಾರ್ಥನೆ  ಮಾಡತ್ತಾರೆ. ತಮ್ಮ ರಾಸುಗಳಿಗೆ ಯಾವ ತೊಂದರೆಯೂ ಬಾರದಿರಲಿ ಎಂದು ಭಕ್ತಿಯಿಂದ ಸ್ಮರಿಸುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗುತ್ತಿಗೆ ಅವಧಿ ಪೂರೈಸಿದ 116 ಆಸ್ತಿ ಪಾಲಿಕೆಗೆ ವಾಪಸ್: ಗೌರವ್ ಗುಪ್ತಾ