Publish Date: Mon, 05 Jul 2021 (20:38 IST)
Updated Date: Mon, 05 Jul 2021 (20:42 IST)
ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಿರಾ? ನಿಮ್ಮ ಬಾಯಲ್ಲಿ ಇಂತಹ ಮಾತು. ಮಿಸ್ಟರ್ ಕುಮಾರಸ್ವಾಮಿ ಮೈಂಡ್ ಯುವರ್ ಲಾಂಗ್ವೆಜ್ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಮಗನ ಸೋಲಿನ ಸೇಡನ್ನು ಈ ರೀತಿ ತೀರಿಸಿಕೊಳ್ಳುತ್ತಿದ್ದೀರಾ? ಸುಮಲತಾ ರೆಬೆಲ್ ಆ್ಯಕ್ಟರ್, ರೆಬೆಲ್ ಸಂಸದೆ. ಮಂಡ್ಯದ ಸೊಸೆ ರೆಬೆಲ್ಸ್ಟಾರ್ ಅಂಬರೀಶ್ ಧರ್ಮಪತ್ನಿ. ಅಂತಹ ಹೆಣ್ಣು ಮಗಳಿಗೆ ಅವಮಾನ ಮಾಡುತ್ತೀರಾ ಎಂದು ಪ್ರಶ್ನಿಸಿದರು.
ಎರಡು ಬಾರಿ ಸಿಎಂ ಆದವರ ಬಾಯಲ್ಲಿ ಇಂತಹ ಮಾತು ಬರಬಾರದು. ಅಣೆಕಟ್ಟಿನ ಸಮಸ್ಯೆ ಇದ್ದರೆ ಪರಿಶೀಲಿಸೋಣ ಅಂತಾ ಹೇಳಿ. ಅದನ್ನು ಬಿಟ್ಟು ಹೆಣ್ಣು. ಮಗಳನ್ನು ಮಲಗಿಸಿ ಅಂದರೆ ಏನು ಭಾಷೆ ಅದು. ಮೈಂಡ್ ಯುವರ್ ಲಾಂಗ್ವೆಜ್ ಎಂದು ಹಳ್ಳಿಹಕ್ಕಿ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.