Publish Date: Mon, 05 Jul 2021 (19:25 IST)
Updated Date: Mon, 05 Jul 2021 (19:29 IST)
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಹಿಂದೆ ಜೈಲಿಗೆ ಕಳುಹಿಸಿದ್ದೇ ಪುತ್ರ ವಿಜಯೇಂದ್ರ. ಈಗ ಇಡೀ ಕುಟುಮಬದವರನ್ನು ಜೈಲಿಗೆ ಕಳುಹಿಸುತ್ತಾನೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ನಕಲಿ ಸಹಿಯನ್ನು ವಿಜಯೇಂದ್ರ ಹಾಕಿದ್ದರಿಂದ ಅವರು ಜೈಲಿಗೆ ಹೋಗಬೇಕಾಯಿತು. ಈಗ ವಿಜಯೇಂದ್ರ ಭ್ರಷ್ಟಾಚಾರ ಮಿತಿ ಮೀರುತ್ತಿದೆ ಎಂದರು.
ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಮುಗಿಸಲು ಹೋಗುತ್ತಿರುವುದೇ ವಿಜಯೇಂದ್ರ. ಹಿಂದುಳಿದ ನಾಯಕರನ್ನು ತುಳಿಯುವ ಕೆಲಸ ಆಗುತ್ತಿದೆ. ನನ್ನನ್ನು ರಾಜಕೀಯವಾಗಿ ಮುಗಿಸಿದ್ದು ಕೂಡ ವಿಜಯೇಂದ್ರ. ಈಗ ರಮೇಶ್ ಜಾರಕಿಹೋಳಿ ಮತ್ತು ಶ್ರೀರಾಮುಲು ಅವರನ್ನು ಮುಗಿಸಲು ಹೊರಟಿದ್ದಾರೆ ಎಂದು ಅವರು ಕಿಡಿಕಾರಿದರು.
ಜಾರಕಿಹೋಳಿ ಪ್ರಕರಣದಲ್ಲಿ ವಿಜಯೇಂದ್ರ ಪಾತ್ರ ಇದೆ. ಎಷ್ಟು ದಿನ ನಿಮ್ಮದು ನಡೆಯುತ್ತೇ ನಾವು ನೋಡೆಯುತ್ತೇವೆ. ರಾಜಕಾರಣದಲ್ಲಿ ಇದು ಸರಿಯಲ್ಲ ಎಂದು ಅವರು ಹೇಳಿದರು.