Select Your Language

Notifications

webdunia
webdunia
webdunia
webdunia

3.O ಜಾರಿ, ಕರುನಾಡು ಕಂಪ್ಲೀಟ್ ಓಪನ್: ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಕೋವಿಡ್​ ನಿಯಮಗಳಿಗಿಲ್ಲ ಕಿಮ್ಮತ್ತು, ದೇಗುಲ ಓಪನ್, ಬಸ್ ಮೆಟ್ರೋ ಸಂಪೂರ್ಣ ಕಾರ್ಯಾಚರಣೆ ಪ್ರಯಾಣಿಕರು ವಿರಳ

3.O ಜಾರಿ, ಕರುನಾಡು ಕಂಪ್ಲೀಟ್ ಓಪನ್: ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಕೋವಿಡ್​ ನಿಯಮಗಳಿಗಿಲ್ಲ ಕಿಮ್ಮತ್ತು, ದೇಗುಲ ಓಪನ್, ಬಸ್ ಮೆಟ್ರೋ ಸಂಪೂರ್ಣ ಕಾರ್ಯಾಚರಣೆ ಪ್ರಯಾಣಿಕರು ವಿರಳ
bangalore , ಸೋಮವಾರ, 5 ಜುಲೈ 2021 (17:27 IST)
ಬೆಂಗಳೂರು: ಕೊರೊನಾ ಎರಡನೆಯ ಅಲೆ ನಿಯಂತ್ರಿಸಲು ಲಾಕ್ಡೌನ್ ಹೇರಲಾಗಿತ್ತು. ಕೊರೊನಾ ಕಡಿಮೆಯಾಗಿದ್ದು ಹಂತ ಹಂತವಾಗಿ ಅನ್ಲಾಕ್ ಮಾಡಲಾಗುತ್ತಿದೆ. ಸೆಮಿ ಅನ್ಲಾಕ್, ಹಾಫ್ ಅನ್ಲಾಕ್ ಎಂದು ಅರ್ಧಂಬರ್ಧ ಓಪನ್ ಆಗಿದ್ದ ರಾಜ್ಯ ಕಂಪ್ಲೀಟ್ ಆಗಿ ಅನ್ಲಾಕ್ ಮಾಡಲಾಗಿದೆ. ಫಿಫ್ಟಿ ಲಾಕ್ ಫಿಫ್ಟಿ ಓಪನ್ ಸೂತ್ರ ಬಿಟ್ಟು ಹಂಡ್ರೆಡ್ ಪರ್ಸೆಂಟ್ ಓಪನ್ ಆಗಿದೆ. ಕಳೆದೆರಡು ತಿಂಗಳಿಂದ ಬಿದ್ದಿದ್ದ ಬೀಗ ಓಪನ್ ಮಾಡಲಾಗಿದೆ. ಆನ್ಲಾಕ್ 3.0 ರಾಜ್ಯದಲ್ಲಿ ಒಂದೆರಡು ಜಿಲ್ಲೆ ಹೊರತುಪಡಿಸಿ ಎಲ್ಲಾ ಕಡೆ ಕಂಪ್ಲೀಟ್ ಓಪನ್ ಮಾಡಲಾಗಿದೆ. ಇಷ್ಟು ದಿನ ಸಂಜೆ 5ರವರೆಗೆ ಮಾತ್ರ ಓಪನ್ ಇದ್ದ ಅಂಗಡಿಗಳು ಇಂದಿನಿಂದ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ವಹಿವಾಟು ನೆಡೆಸುತ್ತಿವೆ.
 
ಕಂಪ್ಲೀಟ್ ಅನ್ಲಾಕ್ ಮನೆಯಲ್ಲೇ ಕೂತು ಬೋರ್ ಹೊಡೆದಿದ್ದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಹಾಗಾಗಿ ಶಾಪಿಂಗ್, ಈಟಿಂಗು ಅಂತಾ ಹೊರಗಡೆ ಹೊರಟಿದ್ದಾರೆ. ವೀಕೆಂಡ್ ನಲ್ಲಿ ಮಾಲ್ ಗಳಲ್ಲಿ ಸ್ವಚ್ಛಂದವಾಗಿ ಓಡಾಡಬಹುದು ಎಂದು  ಖುಷಿಯಾಗಿದ್ದಾರೆ. ಸರ್ಕಾರ ಪರ್ಮಿಷನ್‌ ಕೊಡುತ್ತಿದಂತೆ ಬೆಳೆಗ್ಗೆ 9 ಗಂಟೆಯಿಂದ ಶಾಪಿಂಗ್ ಮಾಲ್‌ಗಳಲ್ಲಿ ವ್ಯಾಪಾರ ನೆಡಯುತ್ತಿದೆ . ಬೆಂಗಳೂರಿನ ಗರುಡಾ ಮಾಲ್, ಮಂತ್ರಿ ಮಾಲ್, ಓರಾಯನ್ ಮಾಲ್ಗಳು ಶಾಪಿಂಗ್ ಪ್ರಿಯರನ್ನು ವೆಲ್ಕಮ್ ಮಾಡುತ್ತಿವೆ.
 
ಮಾರ್ಕೆಟ್ ಓಪನ್ :
 
ರಾಜ್ಯದಲ್ಲಿ ಅನ್​ಲಾಕ್ 3.0 ಜಾರಿ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು, ರೈಲು, ಬಸ್​ ಸಂಚಾರ, ಮಠ, ಮಂದಿರಗಳು ಸೇರಿದಂತೆ ಬಹುತೇಕ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಹೀಗಾಗಿ, ಕೆ.ಆರ್.ಮಾರ್ಕೆಟ್​ ಜನರಿಂದ ತುಂಬಿ ತುಳುಕುತ್ತಿದ್ದು, ಕೋವಿಡ್ ನಿಯಮಗಳು ಅಸ್ತಿತ್ವದಲ್ಲಿದ್ದರೂ ಜನರು ಸಾಮಾಜಿಕ ಅಂತರ ಮರೆತು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ.
 
ಮಾರುಕಟ್ಟೆಗಳಲ್ಲಿ ಕೋವಿಡ್​ ನಿಯಮಗಳಿಗಿಲ್ಲ ಕಿಮ್ಮತ್ತುರಾಜ್ಯಸರ್ಕಾರ ಎರಡನೇ ಅಲೆಯ ಸಂಬಂಧ ಏಪ್ರಿಲ್ 27ರಿಂದ 14 ದಿನಗಳ ಮೊದಲ ಹಂತದ ಲಾಕ್​ಡೌನ್​ ಘೋಷಿಸಿತ್ತು. ಬಳಿಕ ಕೋವಿಡ್​ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಜೂನ್ 7ರವರೆಗೆ ಲಾಕ್​ಡೌನ್ ಮುಂದುವರೆಸಲಾಗಿತ್ತು. ನಂತರ ಹಂತಹಂತವಾಗಿ ಅನ್​ಲಾಕ್ ಪ್ರಕ್ರಿಯೆ ಆರಂಭವಾಗಿದ್ದು, ಇಂದಿನಿಂದ ಅನ್​ಲಾಕ್ 3.0 ಜಾರಿಯಾಗಿದೆ. ಆದರೆ, ಕೋವಿಡ್​ನಿಂದಾಗಿ ಅನೇಕ ಸಾವು ನೋವುಗಳಾದರೂ ಕೂಡ ಇಲ್ಲಿನ ಜನ ಮಾತ್ರ ಬುದ್ಧಿ ಕಲಿಯುತ್ತಿಲ್ಲ. ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಅಗತ್ಯ ವಸ್ತುಗಳ ಖರೀದಿಯಲ್ಲಿ ಮೈಮರೆತಿದ್ದಾರೆ.
 
ರಾಜಧಾನಿಯ ಯಶವಂತಪುರ, ಕೆ.ಆರ್.ಮಾರ್ಕೆಟ್, ಮಲ್ಲೇಶ್ವರಂ, ಜಯನಗರ ಮಾರ್ಕೆಟ್​ನಲ್ಲಿ ಜನರ ದೊಡ್ಡ ಗುಂಪು ಕಂಡುಬಂತು. ರಸ್ತೆಬದಿ ವ್ಯಾಪಾರ ಕೂಡ ಬಲು ಜೋರಾಗಿದ್ದು, ನಿಯಮ ಮೀರಿ ಖರೀದಿಗೆ ಜನರು ಮುಂದಾಗಿದ್ದಾರೆ. ಒಟ್ಟಿನಲ್ಲಿ ಕೊರೊನಾಗೆ ಬೆಂಗಳೂರು ಜನರು ಡೋಂಟ್ ಕೇರ್ ಎನ್ನುತ್ತಿರುವುದೂ ಕೂಡ ವಿಪರ್ಯಾಸವೇ ಸರಿ.
 
ಬಾರ್ ಗಳಿಗೆ ಹಿಂದಿನ ಕಳೆ: 
 
ಮತ್ತೊಂದೆಡೆ ಇಷ್ಟು ದಿನ ಪಾರ್ಸೆಲ್ ಕೌಂಟರ್ನಲ್ಲಿ ಮಾತ್ರ ವಹಿವಾಟು ನಡೆಸ್ತಿದ್ದ ಬಾರ್ ಗಾಲ ಟೇಬಲ್ ಗಳು  ಮತ್ತೆ ಹಿಂದಿನ ಕಳೆ ಮೂಡಿದೆ. ಕಂಪ್ಲೀಟ್ ಕ್ಲೀನ್ ಆಗಿ ಲಕಲಕ ಹೊಳೆಯುತ್ತಿರೋ ಟೇಬಲ್ ಗಳು ಮದ್ಯಪ್ರಿಯರನ್ನು ಅಟ್ರ್ಯಾಕ್ಟ್ ಮಾಡಿವೆ.
 
ಮಾಲ್ ಬೀಗ ಓಪನ್:
 
ಶಾಪಿಂಗ್‌ ಮಾಲ್‌ಗಳಿಗೂ ಯಾವುದೇ ಕಂಡಿಷನ್ ಇಲ್ಲದೇ, ಬಾಗಿಲು ತೆರೆಯೋಕೆ ಪ್ರಮಿಷನ್ ಸಿಕ್ಕಿದ್ದು ಇಂದಿನಿಂದ ಮಾಲ್‌ಗಳು ಝಗಮಗಿಸುತ್ತಿವೆ. ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಮಾಲ್‌ಗಳು ಓಪನ್ ಆಗಿವೆ. ಕೊವಿಡ್ ನಿಯಮ ಪಾಲಿಸಿಕೊಂಡು ಶೇಕಡಾ 100ರಷ್ಟು ಸಿಬ್ಬಂದಿಯೊಂದಿಗೆ ಮಾಲ್‌ಗಳನ್ನ ಓಪನ್ ಮಾಡಲಾಗಿದೆ.
 
ಬಾರ್ ನಲ್ಲಿ ಮತ್ತಿನ ಗಮ್ಮತ್ತು: 
 
ಅನ್‌ಲಾಕ್ 3.Oನಲ್ಲಿ ಮದ್ಯಪ್ರಿಯರಿಗೆ ಇಂದಿನಿಂದ ಮತ್ತಷ್ಟು ಕಿಕ್ ಕೊಟ್ಟಿರುವ ಸರ್ಕಾರ, ಬಾರ್‌ಗಳಲ್ಲಿ ಸಿಟ್ಟಿಂಗ್ ವ್ಯವಸ್ಥೆಗೆ  ಪರ್ಮಿಷನ್ ಕೊಟ್ಟಿದೆ. ಈವರೆಗೂ ಸಂಜೆ 5ಗಂಟೆವರೆಗೂ ಮಾತ್ರ ಬಾರ್‌ನಲ್ಲಿ ಮದ್ಯ ಪಾರ್ಸೆಲ್‌ಗೆ ಅವಕಾಶವಿತ್ತು. ಆದರೆ  ಇಂದಿನಿಂದ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಬಾರ್ ಓಪನ್ ಆಗಿವೆ. ಎರಡು ತಿಂಗಳ ನಂತರ ಬಾರ್‌ನಲ್ಲಿ ಕುಳಿತು ಕಿಕ್‌ ಏರಿಸೋ ಚಾನ್ಸ್ ಕೊಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಡಿನಲ್ಲಿ ಕರು ಕಡಿದು ಅಕ್ರಮವಾಗಿ ಮಾರುತ್ತಿದ್ದವರಿಗೆ ಧರ್ಮದೇಟು