Select Your Language

Notifications

webdunia
webdunia
webdunia
webdunia

ಬಸ್, ಮೆಟ್ರೋ ಸಂಪೂರ್ಣ ಕಾರ್ಯಾಚರಣೆ ಪ್ರಯಾಣಿಕರು ಮಾತ್ರ ವಿರಳ

ಬಸ್, ಮೆಟ್ರೋ ಸಂಪೂರ್ಣ ಕಾರ್ಯಾಚರಣೆ ಪ್ರಯಾಣಿಕರು ಮಾತ್ರ ವಿರಳ
bangalore , ಸೋಮವಾರ, 5 ಜುಲೈ 2021 (17:31 IST)
ರಾಜ್ಯದಲ್ಲಿ ಇಂದಿನಿಂದ ಅನ್ ಲಾಕ್ 3.0 ಜಾರಿಯಾಗಿದ್ದು, ಬಿಎಂಟಿಸಿ ಬಸ್ಸುಗಳು ಸಂಪೂರ್ಣ ಪ್ರಮಾಣದಲ್ಲಿ ರಸ್ತೆಗಿಳಿದಿವೆ. ಇಂದಿನಿಂದ ಸರ್ಕಾರಿ ಕಚೇರಿ ಸೇರಿದಂತೆ ಎಲ್ಲೆಡೆ ಶೇ. 100 ರಷ್ಟು ಅವಕಾಶ ಕೊಟ್ಟಿರುವುದರಿಂದ ಬಸ್, ಮೆಟ್ರೋ ಸಂಚಾರಕ್ಕೂ ಅನುಮತಿ ಸಿಕ್ಕಿದೆ. ಆದ್ರೆ ಬೆಂಗಳೂರಿನಲ್ಲಿ ರಾತ್ರಿ 9 ರಿಂದ ಬೆಳಗ್ಗೆ 5 ರವರೆಗೆ ಬಿಎಂಟಿಸಿ ಬಸ್ ಸಂಚಾರವಿರುವುದಿಲ್ಲ. 
 
ಕೆಎಸ್ಆರ್ಟಿಸಿ, ಬಿಎಂಟಿಸಿಯ, ಮೆಟ್ರೋ ಮತ್ತು ಖಾಸಗಿ ಬಸ್ಸುಗಳು ಮುಂಜಾನೆಯಿಂದಲೇ ಪೂರ್ಣ ಕಾರ್ಯಾಚರಣೆಗಿಳಿದಿವೆ. 
ಅನ್ಲಾಕ್‌ 2.0 ನಲ್ಲಿ ಬಿಎಂಟಿಸಿ 3000 ಸಾವಿರ ಬಸ್ಸುಗಳು ರಸ್ತೆಗಿಳಿದಿದ್ದವು. ಇಂದಿನಿಂದ 5000 ಬಿಎಂಟಿಸಿ ಬಸ್ ಗಳು, 4000 ಕೆಎಸ್ಆರ್ಟಿಸಿ ಬಸ್ ಗಳು ಕಾರ್ಯಾಚರಣೆಗಿಳಿದಿವೆ. 
 
ಪ್ರಯಾಣಿಕರು ಸೀಟ್ ನಲ್ಲಿ ಮಾತ್ರ ಕುಳಿತು ಪ್ರಯಾಣಿಸಲು ಅವಕಾಶವಿದ್ದು, ಬಸ್ ನಲ್ಲಿ ನಿಂತುಕೊಂಡು ಪ್ರಯಾಣ ಮಾಡಲು ಅವಕಾಶ ಇಲ್ಲ ಜೊತೆಗೆ ಕೋವಿಡ್ ರೂಲ್ಸ್ ಪಾಲನೆ ಮಾಡದ ಪ್ರಯಾಣಿಕರಿಗೆ ಬಸ್ ನಿಲ್ದಾಣಗಳಲ್ಲಿ ಅಧಿಕಾರಿಗಳು ದಂಡ ಹಾಕುತ್ತಿದ್ದಾರೆ. 
 
ಪ್ರಯಾಣಿಕರು ಮತ್ತು ಚಾಲಕರು, ನಿರ್ವಾಹಕರಿಗೆ ಮಾಸ್ಕ್ ಕಡ್ಡಾಯ ಎಂದು ಜನಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಆದರೂ ಜನ ಸಂಚಾರ ಎಂದಿನಂತೆ ಇಲ್ಲ. ಪ್ರಯಾಣಿಕರು ಕಡಿಮೆ ಪ್ರಮಾಣದಲ್ಲಿ ಓಡಾಟ ನಡೆಸುತ್ತಿದ್ದಾರೆ. ನೈಟ್ ಕರ್ಫ್ಯೂ ಹಿನ್ನಲೆ ರಾತ್ರಿ ಪಾಳಿಯ ಬಸ್ ಓಡಾಟವಿಲ್ಲ.
 
ಅನ್ಲಾಕ್‌ 2.0 ನಲ್ಲಿ 2000 ರಿಂದ 2500 ಸಾವಿರ ಕೆಎಸ್ ಆರ್ಟಿಸಿ ಬಸ್ಸುಗಳ ಕಾರ್ಯಾಚರಣೆ ಮಾಡಲಾಗಿತ್ತು. ಇಂದಿನಿಂದ 3500 ರಿಂದ 4000 ಬಸ್ ಗಳು ಕಾರ್ಯಾಚರಣೆ ಮಾಡಲಿವೆ. ರಾಜ್ಯದ ಎಲ್ಲಾ ಪ್ರಮುಖ ದೇವಾಲಯಗಳಲ್ಲಿ ಭಕ್ತರಿಗೆ ಅವಕಾಶ ನೀಡಿರುವ ಹಿನ್ನಲೆ, ಪ್ರಯಾಣಿಕರ ಸಂಖ್ಯೆ ಕ್ರಮೇಣ ಹೆಚ್ಚಾಗಲಿದೆ ಎಂಬ ನಿರೀಕ್ಷೆ ಮೇಲೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಕೆಎಸ್ಆರ್ಟಿಸಿ ಗೆ ಯಾವುದೇ ಸಮಯದ ನಿರ್ಬಂಧವಿಲ್ಲ. ರಾತ್ರಿ ವೇಳೆಯಲ್ಲೂ ಕೆಎಸ್ಆರ್ಟಿಸಿ ಬಸ್ಸುಗಳ ಕಾರ್ಯಾಚರಣೆ ಮಾಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

3.O ಜಾರಿ, ಕರುನಾಡು ಕಂಪ್ಲೀಟ್ ಓಪನ್: ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಕೋವಿಡ್​ ನಿಯಮಗಳಿಗಿಲ್ಲ ಕಿಮ್ಮತ್ತು, ದೇಗುಲ ಓಪನ್, ಬಸ್ ಮೆಟ್ರೋ ಸಂಪೂರ್ಣ ಕಾರ್ಯಾಚರಣೆ ಪ್ರಯಾಣಿಕರು ವಿರಳ