ಕೋಡಿಶ್ರೀ ಹೇಳಿದ್ದ ಬಾಂಬ್ ಭವಿಷ್ಯ ನಿಜವಾಯ್ತು: ಇನ್ನೊಂದೂ ನಿಜವಾದರೆ..!

Krishnaveni K
ಸೋಮವಾರ, 11 ಮಾರ್ಚ್ 2024 (09:52 IST)
ಬೆಂಗಳೂರು: ಈ ವರ್ಷ ಬಾಂಬ್ ಸ್ಪೋಟವಾಗುತ್ತದೆ ಎಂಬ ಕೋಡಿಶ್ರೀ ಭವಿಷ್ಯ ಇತ್ತೀಚೆಗೆ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣವಾದ ಬಳಿಕ ನಿಜವಾಗಿದೆ ಎಂದು ಅನಿಸಿತ್ತು. ಆದರೆ ಇದರ ಜೊತೆಗೆ ಕೋಡಿಶ್ರೀಗಳು ಇನ್ನೊಂದು ಭವಿಷ್ಯ ನುಡಿದಿದ್ದರು. ಅದು ನಿಜವಾಗುತ್ತಾ ನೋಡಬೇಕು.

ಇತ್ತೀಚೆಗೆ ಭವಿಷ್ಯ ನುಡಿದಿದ್ದ ಕೋಡಿಶ್ರೀಗಳು ಹಲವು ವಿಚಾರಗಳನ್ನು ಹೇಳಿದ್ದರು. ಅವರು ಹೇಳಿದ ಭವಿಷ್ಯ ಅನೇಕ ಬಾರಿ ನಿಜವಾಗಿದೆ. ಈ ಬಾರಿ ಜಾಗತಿಕವಾಗಿ ಮತಾಂಧತೆ ಹೆಚ್ಚಾಗಲಿದೆ. ಭೂಕಂಪ ಆಗುವ ಸಾಧ‍್ಯತೆಯಿದೆ. ಧಾರ್ಮಿಕ ಮುಖಂಡನ ಸಾವೂ ಆಗಲಿದೆ ಎಂದಿದ್ದರು.

ಅದರ ಜೊತೆಗೆ ಇನ್ನೊಂದು ವಿಚಾರವನ್ನೂ ಹೇಳಿದ್ದರು. ಯುಗಾದಿಗೆ ಮೊದಲು ಮಳೆಯಿಲ್ಲದೇ ಜನ ನೀರಿಗಾಗಿ ಹಾಹಾಕಾರ ನಡೆಸಬಹುದು. ಆದರೆ ಯುಗಾದಿ ನಂತರ ಮಳೆ ಸಾಧ‍್ಯತೆಯಿದೆ ಎಂದಿದ್ದರು. ಹೀಗಾಗಿ ಈ ಭವಿಷ್ಯ ನಿಜವಾಗುವುದೇ ಎಂದು ಜನರು ಎದಿರು ನೋಡುತ್ತಿದ್ದಾರೆ.

ಇತ್ತೀಚೆಗೆ ಬೆಂಗಳೂರ ಸೇರಿದಂತೆ ಇಡೀ ರಾಜ್ಯದಲ್ಲಿ ಸೂಕ್ತ ಮಳೆಯಿಲ್ಲದೇ ಜನ ನೀರಿಗಾಗಿ ಪರದಾಡುವಂತಾಗಿದೆ. ಹೀಗಾಗಿ ಯುಗಾದಿಗೆ ಇನ್ನು ಒಂದೇ ತಿಂಗಳು ಬಾಕಿಯಿದ್ದು, ಕೋಡಿಶ್ರೀಗಳು ಭವಿಷ್ಯ ನುಡಿದಂತೆ ಮಳೆಯಾದರೆ ಜನರು ನೀರಿಗಾಗಿ ಬವಣೆ ಪಡುವುದು ಕೊಂಚ ಮಟ್ಟಿಗೆ ತಗ್ಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯುಟಿ ಖಾದರ್ ಅವಧಿಯಲ್ಲಿ ಭ್ರಷ್ಟಾಚಾರ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಗಂಭೀರ ಆರೋಪ

ರೀಲ್ಸ್‌ ಮಾಡುವಾಗ ಯಮುನಾ ನದಿಗೆ ಜಾರಿ ಬಿದ್ದ ಬಿಜೆಪಿ ಶಾಸಕ ರವೀಂದರ್ ಸಿಂಗ್ ನೇಗಿ

Arecanut Price: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್ ಇಂದಿನ ಬೆಲೆ ಇಲ್ಲಿದೆ

ಆರ್ ಎಸ್ಎಸ್ ಗೆ ನಿರ್ಬಂಧ ಹೇರಲು ಹೋದ ಸರ್ಕಾರಕ್ಕೆ ಮುಖಭಂಗ: ಹೈಕೋರ್ಟ್ ಆದೇಶದಲ್ಲಿ ಏನಿದೆ

ಟೆಡ್ಡಿ ಬಾಯ್ ಪ್ರಿಯಾಂಕ್ ಖರ್ಗೆ,ಅಸ್ಸಾಂ ಅಲ್ಲ ನಿನ್ನ ಕ್ಷೇತ್ರದ ಸಮಸ್ಯೆ ನೋಡ್ಕೋ: ಅಸ್ಸಾಂ ಬಿಜೆಪಿ

ಮುಂದಿನ ಸುದ್ದಿ
Show comments