Select Your Language

Notifications

webdunia
webdunia
webdunia
webdunia

ದೇವೇಗೌಡರು ಕುಟುಂಬ ಉಳಿಸಲು ಏನು ಬೇಕಾದ್ರೂ ಮಾಡ್ತಾರೆ: ಸಿಎಂ ಸಿದ್ದರಾಮಯ್ಯ

Siddaramaiah

Krishnaveni K

ಬೆಂಗಳೂರು , ಭಾನುವಾರ, 10 ಮಾರ್ಚ್ 2024 (14:54 IST)
ಬೆಂಗಳೂರು: ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ಬಗ್ಗೆ ಸಿಎಂ ಸಿದ್ದರಾಮಯ್ಯ ಇಂದು ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್ ವರಿಷ್ಠ ದೇವೇಗೌಡ ಕುಟುಂಬ ಉಳಿಸಲು ಏನು ಬೇಕಾದ್ರೂ ಮಾಡ್ತಾರೆ ಎಂದಿದ್ದಾರೆ.

ಈ ಹಿಂದೆ ಮುಂದಿನ ಜನ್ಮ ಇದ್ದರೆ ಮುಸ್ಲಿಮನಾಗಿ ಹುಟ್ಟುವೆ ಎಂದು ದೇವೇಗೌಡರು ಹೇಳಿದ್ದರು. ಈಗ ತಮ್ಮ ಪಕ್ಷ ಉಳಿಸಿಕೊಳ್ಳಲು ಬಿಜೆಪಿ ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ.  ಕೋಮುವಾದಿಗಳ ಜೊತೆ ಹೋಗಲ್ಲ. ಇದ್ದರೆ ಅವರ ವಿರುದ್ಧ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದಿದ್ದರು. ಈಗ ಅವರ ಜೊತೆಗೇ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸೂಲಿಕೆರೆ ಮೈದಾನದಲ್ಲಿ ನಡೆದ ಶಿಕ್ಷಕರ ಕೃತಜ್ಞತೆ ಸಭೆಯಲ್ಲಿ ಮಾತನಾಡಿದ ಅವರು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ನಮ್ಮ ಗೌಡರಿಗೆ ಅದೇನಾಗಿದ್ಯೋ ಗೊತ್ತಿಲ್ಲ. ಮೋದಿ ಗೆದ್ದರೆ ವಿದೇಶಕ್ಕೆ ಹೋಗುತ್ತೇನೆ ಎಂದಿದ್ದರು. ಈಗ ಅದೇ ಮೋದಿಯನ್ನು ಹೊಗಳುವುದೇನು? ಹಳೇ ಸಂಬಂಧ ಅಂತೆ. ಇದನ್ನು ದೇವೇಗೌಡರಿಂದ ನಿರೀಕ್ಷಿಸಿರಲಿಲ್ಲ’ ಎಂದಿದ್ದಾರೆ.

ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ ಅವರು ತೆರಿಗೆ ಹಂಚಿಕೆ ವಿಚಾರದಲ್ಲಿ ಕೇಂದ್ರ ಅನ್ಯಾಯ ಮಾಡುತ್ತಿದೆ. ನಾವು 100 ಕೊಟ್ಟರೆ ನಮಗೆ 13 ರೂ. ವಾಪಸ್ ಕೊಡ್ತದೆ. ನಮ್ಮ ಹಣವನ್ನೆಲ್ಲಾ ಉತ್ತರ ಭಾರತದವರಿಗೆ ಕೊಡ್ತಾರೆ. ಬೇಡ ಎನ್ನಲ್ಲ, ಆದರೆ ತಾರತಮ್ಯ ಯಾಕೆ ಎಂದು ಕಿಡಿ ಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆಯ ಆವರಣದಲ್ಲಿ ವಿವಸ್ತ್ರನಾಗಿ ಓಡಾಡಿದ ವೈದ್ಯ