Publish Date: Wed, 12 Jul 2023 (11:49 IST)
Updated Date: Wed, 12 Jul 2023 (11:51 IST)
ರಾಯಚೂರು : ಜಿಲ್ಲೆಯ ಮಾನ್ವಿ ಪಟ್ಟಣದ ಮಾರ್ಕೆಟ್ನಲ್ಲಿ ಟೊಮ್ಯಾಟೊಗಾಗಿ ಚಾಕು ಇರಿದ ಘಟನೆ ನಡೆದಿದೆ. ಇದೇ ಜುಲೈ 8 ರ ತಡರಾತ್ರಿ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಾನ್ವಿ ಪುರಸಭೆ ಮಳಿಗೆಯ ತರಕಾರಿ ಮಾರ್ಕೆಟ್ನಲ್ಲಿ ರಫಿ ಎಂಬಾತ ಕಾವಲಿಗಾಗಿ ತಳ್ಳುವ ತರಕಾರಿ ಗಾಡಿಯಲ್ಲಿ ಮಲಗಿದ್ದ. ಈ ವೇಳೆ ರಫಿ ಜೊತೆ ಮಾತನಾಡುವ ನೆಪದಲ್ಲಿ ಅಪರಿಚಿತ ವ್ಯಕ್ತಿ ಬಂದಿದ್ದಾನೆ. ಸಡನ್ ಆಗಿ ಕುತ್ತಿಗೆ ಭಾಗಕ್ಕೆ ಚಾಕು ಇರಿದು ಎಸ್ಕೇಪ್ ಆಗಿದ್ದಾನೆ.ಆರೋಪಿಯ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗಾಯಾಳು ರಫಿಗೆ ಮಾನ್ವಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಟೊಮ್ಯಾಟೊ ಕಳ್ಳತನಕ್ಕೆ ಯತ್ನಿಸಿರೋ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಕುರಿತು ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪತ್ತೆಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.