Publish Date: Wed, 12 Jul 2023 (11:29 IST)
Updated Date: Wed, 12 Jul 2023 (11:31 IST)
ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ಮಳೆಯ ಪ್ರಮಾಣ ಕುಗ್ಗಿದೆ. ಆದರೆ ಕಳೆದ ಒಂದು ವಾರದಲ್ಲಿ ಕೆಆರ್ಎಸ್ ಡ್ಯಾಂನ 10 ಅಡಿ ಭರ್ತಿಯಾಗಿದೆ.
ಒಂದು ವಾರವಷ್ಟೆ ಕೆಆರ್ಎಸ್ ಡ್ಯಾಂಗೆ ಸ್ವಲ್ಪ ಪ್ರಮಾಣದ ಒಳಹರಿವು ಆಗಿದೆ. ಹೀಗಾಗಿ ಒಂದು ವಾರದಲ್ಲಿ ಕೆಆರ್ಎಸ್ ಡ್ಯಾಂನ 10 ಅಡಿ ಭರ್ತಿಯಾಗಿದೆ. ಕುಡಿಯುವ ನೀರಿನ ಹಾಹಾಕಾರದ ಆತಂಕ ಸದ್ಯಕ್ಕೆ ದೂರವಾಗಿದೆ. ಏಳು ದಿನದಲ್ಲಿ ಕೆಆರ್ಎಸ್ ಡ್ಯಾಂನಲ್ಲಿ 5 ಟಿಎಂಸಿ ನೀರು ಶೇಖರಣೆಯಾಗಿದೆ.
ಕಳೆದ ವಾರ 78.56 ಅಡಿ ಇದ್ದ ನೀರಿನ ಮಟ್ಟ ಈಗ 88.10 ಅಡಿಗೆ ತಲುಪಿದೆ. ಕಳೆದ ವಾರ ಡ್ಯಾಂನಲ್ಲಿ 10.166 ಟಿಎಂಸಿ ಇದ್ದ ನೀರಿನ ಶೇಖರಣೆಯು ಸದ್ಯಕ್ಕೆ 14.836 ಟಿಎಂಸಿ ಶೇಖರಣೆಯಾಗಿದೆ.