Publish Date: Fri, 07 Jul 2023 (15:54 IST)
Updated Date: Fri, 07 Jul 2023 (19:17 IST)
ಇದ್ದಕ್ಕಿದ್ದ ಹಾಗೆ ಟೊಮ್ಯಾಟೊಗೆ ಚಿನ್ನದಂತ ಬೆಲೆ ಬಂದಿದೆ.. ಇದನ್ನ ಬಂಡವಾಳ ಮಾಡಿಕೊಂಡ ಖದೀಮರು ಲಕ್ಷಾಂತರ ರೂಪಾಯಿ ಮೌಲ್ಯದ ಟೊಮ್ಯಾಟೊವನ್ನ ಕಳ್ಳತನ ಮಾಡಿದ್ದಾರೆ. ಹಾಸನದ ಬೇಲೂರು ತಾಲ್ಲೂಕಿನ, ಗೋಣಿ ಸೋಮನಹಳ್ಳಿ ಗ್ರಾಮದಲ್ಲಿ ಕಳ್ಳರು 50-60 ಬ್ಯಾಗ್‌ನಷ್ಟು ಟೊಮ್ಯಾಟೊವನ್ನ ಕಳ್ಳತನ ಮಾಡಿದ್ದಾರೆ. ಗೋಣಿ ಸೋಮನಹಳ್ಳಿ ಗ್ರಾಮದ ಧರಣಿ ಎಂಬುವವರ ಜಮೀನಿಗೆ ರಾತ್ರಿ ಕಳ್ಳರು ನುಗ್ಗಿದ್ದು, ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಮೌಲ್ಯದ ಟೊಮ್ಯಾಟೊವನ್ನ ಕಳ್ಳತನ ಮಾಡಿದ್ದಾರೆ. ಇಂದು ಬೆಳಗ್ಗೆ ಧರಣಿ ತಮ್ಮ ಜಮೀನಿನ ಬಳಿ ಹೋದಾಗ ಟೊಮ್ಯಾಟೊ ಕಳ್ಳತನವಾಗಿರುವುದು ಬೆಳಕಿಗೆ ಬಂದಿದ್ದು, ಹಳೆಬೀಡು ಪೊಲೀಸರಿಗೆ ದೂರು ನೀಡಿದ್ದಾರೆ.