ಬೆಂಗಳೂರು: ನಂದಿನಿ ಹಾಲಿನ ದರವನ್ನು 5 ರೂ.ಗಳಷ್ಟು ಏರಿಕೆ ಮಾಡಲಾಗುತ್ತದೆ ಎಂಬ ಸುದ್ದಿಗಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಬಜೆಟ್ ಬಳಿಕ ನಂದಿನಿ ಹಾಲಿನ ದರ ಏರಿಕೆಯಾಗಲಿದೆ ಎಂದು ಕಳೆದ ಕೆಲವು ದಿನಗಳಿಂದ ಸುದ್ದಿ ಹಬ್ಬಿದೆ. ಈಗಾಗಲೇ ಬಸ್, ಮೆಟ್ರೊ ದರ ಏರಿಕೆ ಬೆನ್ನಲ್ಲೇ ಈಗ ಹಾಲಿನ ದರ ಏರಿಕೆ ಸುದ್ದಿ ಮಧ್ಯಮ ವರ್ಗದವರ ಚಿಂತೆಗೆ ಕಾರಣವಾಗಿತ್ತು.
ಆದರೆ ಇದೀಗ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸದ್ಯಕ್ಕೆ ಸರ್ಕಾರ ಈ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದಿದ್ದಾರೆ. ಆದರೆ ಸಂಬಂಧಿತ ಇಲಾಖೆಯಿಂದ ಒತ್ತಡವಿರುವುದು ನಿಜ ಎಂದಿದ್ದಾರೆ.
ದರ ಹೆಚ್ಚಳದಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಪ್ರಸ್ತಾವನೆಯಿದೆ. ಆದರೆ ಸರ್ಕಾರ ಈ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಹಾಲಿನ ದರ ಹೆಚ್ಚಳ ಮಾಡಿದರೆ ಅದನ್ನು ರೈತರಿಗೆ ನೀಡಬೇಕು ಎಂದು ಚರ್ಚೆಯಾಗಿದೆ. ದರ ಹೆಚ್ಚಳದ ಬಗ್ಗೆ ಸರ್ಕಾರಕ್ಕೂ ಒತ್ತಡವಿದೆ. ಆದರೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದಿದ್ದಾರೆ.