Webdunia - Bharat's app for daily news and videos

Install App

ಐಟಿ ಅಧಿಕಾರಿ ಪುತ್ರನನ್ನ ಅಪಹರಿಸಿ ಕೊಲೆ.. ಬೆಚ್ಚಿ ಬಿದ್ದ ಬೆಂಗಳೂರು

Webdunia
ಶುಕ್ರವಾರ, 22 ಸೆಪ್ಟಂಬರ್ 2017 (11:29 IST)
ಐಟಿ ಅಧಿಕಾರಿ ನಿರಂಜನ್ ಪುತ್ರ ಶರತ್ ಅಪಹರಣ ಪ್ರಕರಣ ದುರಂತ ಅಂತ್ಯ ಕಂಡಿದೆ.  ಶರತ್ ಅಪಹರಣದ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರಿಂದ ಭಯಗೊಂಡ ಅಪಹರಣಕಾರರು ಆತನನ್ನ ಕೊಂದು ಹೂತಿಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.

ಶರತ್ ಅಕ್ಕನ ಸಹಪಾಠಿ ವಿಶಾಲ್ ಸಹಚರರ ಜೊತೆಸೇರಿ ಹಣಕ್ಕಾಗಿ ಸೆಪ್ಟೆಂಬರ್ 12ರಂದು ಶರತ್`ನನ್ನ ಅಪಹರಿಸಿ ಸ್ವಿಫ್ಟ್ ಕಾರಿನಲ್ಲಿ ಸುತ್ತಿಸಿದ್ದ. ವಾಟ್ಸಾಪ್ ವಿಡಿಯೋ ಮಾಡಿ ಮನೆಗೆ ಕಳುಹಿಸಿದ್ದ. ಹಣ ನೀಡದಿದ್ದರೆ ಇವರು ನನ್ನನ್ನ ಕೊಂದು ಬಿಡುತ್ತಾರೆ ಎಂದು ಶರತ್`ನಿಂದಲೇ ಹೇಳಿಸಿದ್ದ. ಬಳಿಕ ಪೊಲೀಸರಿಗೆ ಪೋಷಕರಿಗೆ ದೂರು ನೀಡಿದ್ದರು. ದೂರು ನೀಡಿದ ದಿನವೇ ದುಷ್ಕರ್ಮಿಗಳು ಶರತ್ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾರೆಂದು ತಿಳಿದು ಬಂದಿದೆ.

ಕೊಲೆ ಮಾಡಿದ ಬಳಿಕ ಶವಕ್ಕೆ ಕಲ್ಲು ಕಟ್ಟಿ ರಾಮೋಹಳ್ಳಿ ಕೆರೆಗೆ ಹಾಕಿದ್ದರು. ಪ್ರತಿ ದಿನ ಶವ ತೇಲುತ್ತದೆಯೇ ಎಂದು ಪರೀಕ್ಷಿಸಲು ಕೆರೆಯ ಬಳಿಗೆ ಬಂದು ಹೋಗಿರುತ್ತಾರೆ. ಒಂದು ದಿನ ಶವ ತೇಲುತ್ತಿದ್ದದ್ದನ್ನ ಕಂಡು ಶವವನ್ನ ಮತ್ತೆ ಸ್ವಿಫ್ಟ್ ಕಾರಿನಲ್ಲಿ ಹಾಕಿಕೊಂಡು ಕೆರೆ ಪಕ್ಕದಲ್ಲಿ ಹೂತು ಹಾಕುತ್ತಾರೆ.ಕರೆಗಳ ಮಾಹಿತಿ ಆಧರಿಸಿದ ಪೊಲೀಸರು ವಿಸಾಲ್`ನನ್ನ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ, ಪೊಲೀಸರು ಶವಕ್ಕಾಗಿ ಶೋಧ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments