Select Your Language

Notifications

webdunia
webdunia
webdunia
webdunia

ಖತರ್ನಾಕ್ ಕಳ್ಳ ಲಾಕ್​​ ​ ​​​​​​​

Khatarnak thief lock
ಕೆ.ಆರ್ ಪೇಟೆ , ಸೋಮವಾರ, 17 ಅಕ್ಟೋಬರ್ 2022 (19:39 IST)
ಸರ ಕೀಳಲು ಬಂದವನು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಅಕ್ಕೆಬಾಳು ಗ್ರಾಮದಲ್ಲಿ ನಡೆದಿದೆ. ಸರ ಕೀಳಲು ಯತ್ನಿಸಿದ ನೂರುಲ್ಲಾಗೆ ಧರ್ಮದೇಟು ಬಿದ್ದಿದ್ದು, ಸರಗಳ್ಳನನ್ನ ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ‌ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಮನೆ ಮುಂದೆ ರಂಗೋಲಿ ಹಾಕುತ್ತಿದ್ದ ಮಹಿಳೆಯ ಕತ್ತಿಗೆ ಕೈ ಹಾಕಿ ಸರ ಕೀಳಲು ಯತ್ನಿಸಿದ್ದಾನೆ. ಬಳಿಕ ಅಲ್ಲೆ ಇದ್ದ ಸ್ಥಳೀಯರ ಕೈಯಲ್ಲಿ ತಗಲಾಕಿ ಕೊಂಡ ಆರೋಪಿಯನ್ನ ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾ ಮುಗ್ಗಾ ಥಳಿಸಿದ್ದಾನೆ. ಸ್ಥಳೀಯರು ಆರೋಪಿಯನ್ನ ಹಿಡಿದು ಕೆ.ಆರ್ ಪೇಟೆ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಕೆ.ಆರ್ ಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಲಿಸುತ್ತಿದ್ದ ರೈಲಿಂದ ಕೆಳಗೆ ನೂಕಿದ ಪಾಪಿ