Publish Date: Mon, 17 Oct 2022 (19:21 IST)
Updated Date: Mon, 17 Oct 2022 (19:25 IST)
ಹಾವೇರಿಯ ಸಿದ್ದರೂಢ ಮಠದ ಗೇಟಿಗೆ ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಖಂಡೆರಾಯನಹಳ್ಳಿ ತಾಂಡಾದಲ್ಲಿ ಈ ಘಟನೆ ನಡೆದಿದೆ. ೫೦ ವರ್ಷ ವಯಸ್ಸಿನ ಮಂಜಪ್ಪ ಲಮಾಣಿ ನೇಣಿಗೆ ಶರಣಾದ ವ್ಯಕ್ತಿಯಾಗಿದ್ದಾರೆ. ಮಠದ ಟ್ರಸ್ಟ್ ಮತ್ತು ಮಂಜಪ್ಪ ಲಮಾಣಿ ನಡುವೆ ಜಾಗದ ವಿಚಾರವಾಗಿ ಹಲವು ವರ್ಷಗಳಿಂದ ವಾದ ನಡೆದಿತ್ತು.
ಸಿದ್ಧರೂಡಮಠದ ಟ್ರಸ್ಟ್ ನವರು ಮಂಜಪ್ಪ ಬಳಕೆ ಮಾಡುತ್ತಿದ್ದ ಭೂಮಿಯನ್ನ ಬಳಸಿಕೊಂಡಿದ್ದಾರೆ ಎನ್ನುವ ಆರೋಪ ಇದೆ. ಈ ಹಿನ್ನೆಲೆ ಮನನೊಂದು ಮಂಜಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಕುಟುಬಸ್ಥರು ಆರೋಪಿಸಿದ್ದಾರೆ.