Publish Date: Mon, 17 Oct 2022 (16:59 IST)
Updated Date: Mon, 17 Oct 2022 (17:05 IST)
ಪದೇ ಪದೇ ಸರ್ಕಾರ ಹಾಗೂ ನಾಯಕರ ವಿರುದ್ದ ಯತ್ನಾಳ್ ಟೀಕೆ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ನೀಡಿದ್ದಾರೆ. ಪಂಚಮಸಾಲಿಯ ನಾಲ್ಕು ಜನ ಸಚಿವರು ನಮ್ಮಲ್ಲಿ ಇದ್ದಾರೆ, ಸ್ವಾಮೀಜಿಗಳೂ ಸಹ ಮೋದಿಯವರೊಂದಿಗೆ ಖುಷಿಯಾಗಿದ್ದಾರೆ ಅಸಮಾಧಾನದ ಪ್ರಶ್ನೆಯೇ ಬರಲ್ಲ ಎಂದ ಕಾಂಗ್ರೆಸ್ ಭಾರತ್ ಜೋಡೊ ಯಾತ್ರೆ ಮಾಡುತ್ತಿದೆ. ಯಾತ್ರೆ ಉದ್ದಕ್ಕೂ ಸಹ ಫಲಾನುಭವಿಗಳ ಸಭೆ ಮಾಡಲಿ, ಕಾಂಗ್ರೆಸ್ ಅವಧಿಯಲ್ಲಿ ಯಾವ ಫಲಾನುಭವಿಗಳಿಗೆ ಏನೇನು ಮಾಡಿದ್ದಾರೆ ಎಂದು ಚರ್ಚೆ ಮಾಡಲಿ, ಉಚಿತ ಅನ್ನ, ಗ್ಯಾಸ್, ಆಯುಷ್ಮಾನ್ ಭಾರತದಂತ ಹೆಲ್ತ್ ಕಾರ್ಡ್ ಕೊಟ್ಟಿದ್ದಾರಾ..? ಅವರ ಅಧಿಕಾರಾವಧಿಯ ಫಲಾನುಭವಿಗಳ ಜತೆ ಸಭೆ ಮಾಡಿದರೆ ಅವರಿಗೆ ಶೂನ್ಯ ಉತ್ತರ ಸಿಗುತ್ತೆ, ಅದೇ ಕಾರಣಕ್ಕಾಗಿ ಜನರಿಂದ ಕಾಂಗ್ರೇಸ್ನವರು ದೂರ ಓಡುತ್ತಿದ್ದಾರೆ ಎಂದು ಅರುಣ್ ಸಿಂಗ್ ತಿರುಗೇಟು ನೀಡಿದ್ದಾರೆ.