Select Your Language

Notifications

webdunia
webdunia
webdunia
webdunia

ಜನಸಾಮಾನ್ಯರಿಗೆ ಕೈಯಾರೆ ಊಟ ಬಡಿಸಿದ ಸಿ.ಎಂ ಬೊಮ್ಮಾಯಿ

ಜನಸಾಮಾನ್ಯರಿಗೆ ಕೈಯಾರೆ ಊಟ ಬಡಿಸಿದ ಸಿ.ಎಂ ಬೊಮ್ಮಾಯಿ
ಚಿಕ್ಕಬಳ್ಳಾಪುರ , ಭಾನುವಾರ, 9 ಅಕ್ಟೋಬರ್ 2022 (20:15 IST)
ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ಬಸವರಾಜ ಬೊಮ್ಮಾಯಿಯವರು  ಜನಸಾಮಾನ್ಯರಿಗೆ ಊಟವನ್ನು ಬಡಿಸಿ  ಅವರೊಂದಿಗೇ ಕೂತು ಊಟ ಸವಿದ ಬಲು ಅಪರೂಪದ ಘಟನೆ ಚಿಕ್ಕಬಳ್ಳಾಪುರದ  ಈಶಾ ಯೋಗ ಕೇಂದ್ರದಲ್ಲಿ ಶನಿವಾರ ರಾತ್ರಿ ನಡೆದಿದೆ.
 
ಚಿಕ್ಕಬಳ್ಳಾಪುರ ತಾಲೂಕಿನ ನರಸಿಂಹದೇವರಬೆಟ್ಟದ ಬಳಿ ಈಶಾ ಫೌಂಡೇಶನ್ ವತಿಯಿಂದ ಈಶಾ ಯೋಗ ಕೇಂದ್ರ, 112 ಅಡಿ ಎತ್ತರದ ಅದಿಯೋಗಿ ಶಿವನ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ. ಇದೇ ಜಾಗದಲ್ಲಿ ನಾಗಮಂಟಪ ಉದ್ಘಾಟನಾ ಕಾರ್ಯಕ್ರಮ ನಿನ್ನೆ ನೆರವೇರಿತು. 
 
ಈ ಕಾರ್ಯದಲ್ಲಿ ಭಾಗಿಯಾಗಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಕಾರ್ಯಕ್ರಮ ಮುಗಿದ ನಂತರ ಜನಸಾಮಾನ್ಯರಿಗೆ ತಮ್ಮ ಕೈಯ್ಯಾರೆ ಊಟ ಬಡಿಸಿದ್ದಾರೆ. ತದನಂತರ ಜನಸಾಮಾನ್ಯರ ಜೊತೆಯಲ್ಲೇ ಕೂತು ಊಟ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯದಶಮಿ ಅಂಗವಾಗಿ ಆರ್.ಎಸ್.ಎಸ್ ನಿಂದ ಪಂಥ ಸಂಚಲನ