Select Your Language

Notifications

webdunia
webdunia
webdunia
webdunia

‘ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಾಡಲಾಗುತ್ತೆ-ಸಿಎಂ ಬೊಮ್ಮಾಯಿ

‘ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಾಡಲಾಗುತ್ತೆ-ಸಿಎಂ ಬೊಮ್ಮಾಯಿ
ವಿಜಯಪುರ , ಶನಿವಾರ, 17 ಸೆಪ್ಟಂಬರ್ 2022 (20:30 IST)
ಇಂದು ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಕಲಬುರಗಿಗೆ ಪ್ರಯಾಣ ಬೆಳೆಸಿದ್ರು. ಸರ್ಧಾರ್ ವಲ್ಲಭಭಾಯ್ ಪಟೇಲ್ ಪುತ್ಥಳಿಗೆ  ಮಾಲಾರ್ಪಣೆ ಮಾಡಿದ್ರು. ಕಲಬುರಗಿ ನಗರದ DAR ಪೊಲೀಸ್ ಮೈದಾನದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣ ನಂತರ ವಿವಿಧ ಪೊಲೀಸ್ ತುಕಡಿಗಳಿಂದ ಸಿಎಂಗೆ ಗೌರವ ವಂದನೆ ಸಲ್ಲಿಸಲಾಯಿತು. ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ‌ ಮಾತನಾಡಿದ್ದು, ಬಜೆಟ್‌ನಲ್ಲಿ KKRDBಗೆ 3000 ಕೋಟಿ ರೂ ಮೀಸಲು ಇಡಲಾಗಿದೆ. ಈಗಾಗಲೇ  KKRDBಗೆ 1500 ಕೋಟಿ ರೂ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳ ಅಭಿವೃದ್ಧಿಗೆ ಸರ್ಕಾರ ಬದ್ದವಾಗಿದೆ ಎಂದು ತಿಳಿಸಿದ್ರು. ನಮ್ಮದು ಕ್ರಿಯಾಶೀಲವಾಗಿರೋ ಸರ್ಕಾರ, ಪ್ರಾದೇಶಿಕ ಅಸಮತೋಲನ ನಿವಾರಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ‌ ಜಿಲ್ಲೆಗಳಲ್ಲಿ 2001 ಶಾಲಾ ಕೋಣೆಗಳ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಈ ಭಾಗದ ಸಮಗ್ರ ಕೈಗಾರಿಕಾ ಅಭಿವೃದ್ಧಿಗೆ ಕೈಗಾರಿಕೆ ನೀತಿ ತರಲಾಗಿದೆ ಎಂದು ತಿಳಿಸಿದ್ರು. ರಾಯಚೂರು ಹಾಗೂ ವಿಜಯಪುರ ಜಿಲ್ಲೆಯಲ್ಲಿ ಟೆಕ್ಸ್ಟ್‌ಟೈಲ್ ಪಾರ್ಕ್ ನಿರ್ಮಾಣ ಮಾಡಲಾಗ್ತಿದೆ. ಎರಡು ಟೆಕ್ಸ್ಟ್‌ಟೈಲ್ ಪಾರ್ಕ್‌ನಲ್ಲಿ 25 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ ಎಂದು ತಿಳಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಕಾಡಿನಿಂದ ನಾಡಿದ ಬಂದ ಗಜರಾಜ