Select Your Language

Notifications

webdunia
webdunia
webdunia
webdunia

ಚಲಿಸುತ್ತಿದ್ದ ರೈಲಿಂದ ಕೆಳಗೆ ನೂಕಿದ ಪಾಪಿ

ಚಲಿಸುತ್ತಿದ್ದ ರೈಲಿಂದ ಕೆಳಗೆ ನೂಕಿದ ಪಾಪಿ
ಬಿರ್​ಭಾಮ್ , ಸೋಮವಾರ, 17 ಅಕ್ಟೋಬರ್ 2022 (19:34 IST)
ಟ್ರೈನ್​ಗಳಲ್ಲಿ ಸಣ್ಣ-ಪುಟ್ಟ ವಿಚಾರಕ್ಕೂ ಪ್ರಯಾಣಿಕರ ನಡುವೆ ಜಗಳ ಆಗೋದು ಕಾಮನ್​. ಆದ್ರೆ, ಹೌರಾ-ಮಾಲ್ಡಾ ಇಂಟರ್​ಸಿಟಿ ಎಕ್ಸ್​ಪ್ರೆಸ್​ ರೈಲಿನಲ್ಲಿ ಇಬ್ಬರು ಪ್ರಯಾಣಿಕರ ಮಧ್ಯೆ ಜಗಳ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿದೆ. ಈ ನಡುವೆ ಜಗಳ ತಾರಕಕ್ಕೇರಿದ್ದು, ಪ್ರಯಾಣಿಕನನ್ನ ಚಲಿಸುವ ಟ್ರೈನ್​ನಿಂದಲೇ ಹೊರಗೆ ತಳ್ಳಿದ್ದಾನೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಕಳೆದ ಶನಿವಾರ ಈ ಘಟನೆ ನಡೆದಿದ್ದು, ಚಲಿಸುವ ರೈಲಿಂದ ಕೆಳಗೆ ಬಿದ್ದ ವ್ಯಕ್ತಿ ಸಜ ಶೇಕ್​​ಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಬಿರ್​ಭಾಮ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ