Select Your Language

Notifications

webdunia
webdunia
webdunia
webdunia

ಬೈಕ್‌ಗೆ ನಾಯಿಯನ್ನು ಕಟ್ಟಿ 6ಕಿಲೋ ಮೀಟರ್ ಎಳೆದೊಯ್ದ ಪಾಪಿಗೆ ಬಿಸಿ ಮುಟ್ಟಿಸಿದ ಖಾಕಿ

Dog Tied Bike

Sampriya

ಉಡುಪಿ , ಭಾನುವಾರ, 21 ಜುಲೈ 2024 (16:04 IST)
ಉಡುಪಿ: ಕ್ರೂರಿಯೊಬ್ಬ ತನ್ನ ಬೈಕ್‌ಗೆ ನಾಯಿಯನ್ನು ಕಟ್ಟಿ ಆರು ಕಿಲೋಮೀಟರ್‌ವರೆಗೆ ಎಳೆದೊಯ್ದಿರುವ ಘಟನೆ ಉಡುಪಿಯ ಶಿರ್ವ ಗ್ರಾಮ ಪಂಚಾಯತ್‌ನ ಕಟ್ಟಡದ ಮುಂಬಾಗ ನಡೆದಿದೆ.

ನಾಯಿಯನ್ನು ಅಮಾನುಷವಾಗಿ ನಡೆಸಿಕೊಂಡ ವ್ಯಕ್ತಿಯನ್ನು ಅಬ್ದುಲ್ ಖಾದರ್ ಎಂದು ಗುರುತಿಸಲಾಗಿದೆ. ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ಪ್ರಾಣಿ ಪ್ರಿಯರು ಆಕ್ರೋಶ ಹೊರಹಾಕುತ್ತಿದ್ದಾರೆ.  ಅಬ್ದುಲ್ ಖಾದರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸಿದ್ದಾರೆ.

ಇನ್ನೂ ಈ ಸಂಬಂಧ ಪ್ರಾಣಿ ದಯಾ ಸಂಘದ ಸದಸ್ಯೆ ಮಂಜುಳಾ ಕರ್ಕೇರ ಅವರು ಪೊಲೀಸರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅದರಂತೆ ಇದೀಗ ಆರೋಪಿ ವಿರುದ್ಧ ಸೆಕ್ಷನ್ 325 ಬಿಎನ್‌ಎಸ್ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೀಲ್ಸ್ ಮಾಡುವ ಬಸ್‌ ಚಾಲಕರಿಗೆ ವಾರ್ನಿಂಗ್ ಕೊಟ್ಟ ರಾಮಲಿಂಗಾ ರೆಡ್ಡಿ