ಬಿಜೆಪಿಯಲ್ಲಿ ನಡೆಯುತ್ತಿರುವ ಮಹತ್ವದ ಬೆಳವಣಿಗೆ ಸಿಎಂ ಬಿ.ಎಸ್.ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ರಾಜ್ಯಪಾಲರ ಹುದ್ದೆಗೆ ಒಯ್ಯಲಿದೆಯಾ?
									
										
								
																	
ಇಂಥದ್ದೊಂದು ಅನುಮಾನಕ್ಕೆ ಇದೀಗ ಜೆಡಿಎಸ್ ಶಾಸಕ ಸಿಡಿಸಿರೋ ಬಾಂಬ್ ಪುಷ್ಠಿಯೊದಗಿಸುತ್ತಿದೆ. 
ಮುಖ್ಯಮಂತ್ರಿ ಹುದ್ದೆಯಿಂದ ಗೌರವಯುತವಾಗಿ ಕೆಳಗೆ ಇಳಿದು ಬನ್ನಿ ಅಂತ ಬಿ.ಎಸ್.ಯಡಿಯೂರಪ್ಪರಿಗೆ ಬಿಜೆಪಿ ಹೈಕಮಾಂಡ್ ಖಡಕ್ ಸೂಚನೆ ನೀಡಿದೆ. ಹೀಗಂತ ಯಾದಗಿರಿಯಲ್ಲಿ ಗುರುಮಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಹೊಸ ವಿಷಯ ಸ್ಫೋಟಿಸಿದ್ದಾರೆ.
									
			
			 
 			
 
 			
			                     
							
							
			        							
								
																	ಡಿಸೆಂಬರ್ ಒಳಗೆ ಸಿಎಂ ಸ್ಥಾನದಿಂದ ಯಡಿಯೂರಪ್ಪ ಕೆಳಗೆ ಇಳಿಯಲಿದ್ದಾರೆ. ಆ ಬಳಿಕ ಕೇರಳ ರಾಜ್ಯಪಾಲರಾಗಿ ಮುಂದುವರಿಯಲಿದ್ದಾರೆ ಅಂತ ಕಂದಕೂರ ಭವಿಷ್ಯ ನುಡಿದಿದ್ದಾರೆ.