Publish Date: Wed, 06 Nov 2019 (16:37 IST)
Updated Date: Wed, 06 Nov 2019 (16:40 IST)
ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ವಿಧಾನ ಪರಿಷತ್ ಸದಸ್ಯರಾಗಿರುವ ಪುಟ್ಟಣ್ಣ ಅವರನ್ನು ಜೆಡಿಎಸ್ ನಿಂದ ಉಚ್ಚಾಟನೆ ಮಾಡಿ ಪಕ್ಷದ ರಾಜ್ಯಾಧ್ಯಕ್ಷ ಆದೇಶ ಹೊರಡಿಸಿದ್ದಾರೆ.
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಆದೇಶ ಹೊರಡಿಸಿದ್ದು, ಪಕ್ಷ ವಿರೋಧಿಯಾಗಿ ಚಟುವಟಿಕೆ ನಡೆಸಿರೋ ಆರೋಪದ ಮೇರೆಗೆ ಎಂಎಲ್ ಸಿ ಪುಟ್ಟಣ್ಣರನ್ನು ಪಾರ್ಟಿಯಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ.
ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯರೆಲ್ಲರೂ ಪಕ್ಷ ಬಿಡಲು ತೀರ್ಮಾನ ಮಾಡುತ್ತಿದ್ದಾರೆ. ನಾನೂ ಸಹ ಪಾರ್ಟಿಯಿಂದ ದೂರ ಸರಿಯುವ ನಿರ್ಧಾರ ಮಾಡುತ್ತಿದ್ದೇನೆ ಅಂತ ಪುಟ್ಟಣ್ಣ ಹೇಳಿಕೆ ನೀಡಿದ್ದರು.