Select Your Language

Notifications

webdunia
webdunia
webdunia
webdunia

ಕಾಸರಗೋಡಿನಲ್ಲೊಂದು ಮೈ ನಡುಗಿಸುವ ಆಕ್ಸಿಡೆಂಟ್ ವಿಡಿಯೋ

Kasaragod accident

Krishnaveni K

ಕಾಸರಗೋಡು , ಮಂಗಳವಾರ, 9 ಸೆಪ್ಟಂಬರ್ 2025 (10:12 IST)
ಕಾಸರಗೋಡು: ಗಡಿನಾಡು ಕಾಸರಗೋಡಿನ ಅಡ್ಕತ್ತಬೈಲಿನಲ್ಲಿ ಮಹಿಳೆಯೊಬ್ಬರಿಗೆ ಕಾರು ಢಿಕ್ಕಿ ಹೊಡೆದ ಮೈ ನಡುಗಿಸುವ ಆಕ್ಸಿಡೆಂಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
 

ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಕತ್ತಬೈಲ್ ಸಮೀಪ ಈ ಘಟನೆ ನಡೆದಿದೆ. ರಸ್ತೆ ದಾಟುತ್ತಿದ್ದ ಮಹಿಳೆ ತನ್ನ ಅಜಾಗರೂಕತೆಯಿಂದಲೇ ಅಪಾಯ ಮೈಮೇಲೆಳೆದುಕೊಂಡಿದ್ದಾಳೆ. ಚತುಷ್ಪಥ ರಸ್ತೆಯಲ್ಲಿ ಸರಿಯಾಗಿ ಗಮನಿಸದೇ ರಸ್ತೆ ದಾಟಲು ಹೋದ ಮಹಿಳೆಗೆ ವೇಗವಾಗಿ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ.

ಇದನ್ನು ವಾಹನ ಸವಾರರ ತಪ್ಪು ಎಂದೂ ಹೇಳಲಾಗದು. ವೇಗವಾಗಿ ವಾಹನಗಳು ಓಡಾಡುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುವಾಗ ಮೈ ಎಲ್ಲಾ ಕಣ್ಣಾಗಿದ್ದರೂ ಸಾಲದು. ಅಂತಹದ್ದರಲ್ಲಿ ಈ ಮಹಿಳೆ ಸರಿಯಾಗಿ ಗಮನಿಸದೇ ರಸ್ತೆ ದಾಟಿದ್ದಾಳೆ. ಈ ವೇಳೆ ಕಾರೊಂದು ಬಂದು ಢಿಕ್ಕಿ ಹೊಡೆದಿದೆ.

ಪರಿಣಾಮ ಮಹಿಳೆ ಆಳೆತ್ತರಕ್ಕೆ ಚಿಮ್ಮಿ ರಸ್ತೆಗೆ ಬಿದ್ದಿದ್ದಾರೆ. ಈ ಭಯಾನಕ ಆಕ್ಸಿಡೆಂಟ್ ದೃಶ್ಯ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.  ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಸೀದಿ ಮುಂದೆ ಗಲಾಟೆ ಮಾಡಿದ್ದಕ್ಕೆ ಲಾಠಿ ಚಾರ್ಜ್ ಮಾಡಿದ್ದು: ಸಿದ್ದರಾಮಯ್ಯ ಸಮರ್ಥನೆ