Select Your Language

Notifications

webdunia
webdunia
webdunia
webdunia

ಆಂಧ್ರಪ್ರದೇಶ: ಬಸ್‌ನಲ್ಲಿ ಸೀಟಿಗಾಗಿ ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಇಬ್ಬರು

ಆಂಧ್ರಪ್ರದೇಶ ಬಸ್ ಸೀಟ್ ಫೈಟ್

Sampriya

ಆಂಧ್ರ ಪ್ರದೇಶ , ಶನಿವಾರ, 30 ಆಗಸ್ಟ್ 2025 (17:20 IST)
Photo Credit X
ಆಂಧ್ರ ಪ್ರದೇಶ: ಇಲ್ಲಿನ ವಿಜಯನಗರಂ ಜಿಲ್ಲೆಯಲ್ಲಿ ಬಸ್‌ ಸೀಟ್‌ಗಾಗಿ ಮಹಿಳೆ ಹಾಗೂ ವ್ಯಕ್ತಿಯ ನಡುವೆ ನಡೆದ ಗಲಾಟೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಬಸ್ ಹತ್ತುವ ಮುನ್ನಾ ತಾನು ಹಿಡಿದಿಟ್ಟಿದ್ದ ಸೀಟ್‌ನಲ್ಲಿ ಕುಳಿತಿದ್ದಾನೆಂದು ಮಹಿಳೆ ಕ್ಯಾತೆ ತೆಗೆದಿದ್ದಾರೆ. ಮಾತು ವಿಕೋಪಕ್ಕೆ ತಿರುಗಿ ಇಬ್ಬರು ಚಪ್ಪಲಿಯಲ್ಲಿ ಹೊಡೆದಿದ್ದಾರೆ. 

ಮಹಿಳೆ ಹೇಳಿದಂತೆ ಬಸ್ ನಿಲ್ದಾಣದಲ್ಲಿರುವಾಗಲೇ ತನಗಾಗಿ ಮತ್ತು ತನ್ನ ಮಗಳಿಗಾಗಿ ಹೊರಗಿನಿಂದ ದುಪ್ಪಟ ಹಾಕಿ ಸೀಟು ಹಿಡಿದಿದ್ದೆ. ಆದರೆ ಬಸ್ ಹತ್ತಿದಾಗ ಈತ ತನ್ನ ದುಪ್ಪಟ್ಟಾ ತೆಗೆದು ಕುಳಿತುಕೊಂಡಿದ್ದ. ಸೀಟ್ ಹಿಡಿದಿದ್ದೇನೆ ಎಂದು ಹೇಳಿದರೂ ಕೇಳದೇ ಬಲವಂತವಾಗಿ ಕುಳಿತುಕೊಂಡ ಎಂದು ಆರೋಪಿಸಿದ್ದಾರೆ.

ವ್ಯಕ್ತಿಗೆ ಮಹಿಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಇದಕ್ಕೆ ಆತನೂ ಗದರಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ನೋಡನೋಡುತ್ತಲೇ ಆತನ ಮೇಲೆ ಹಲ್ಲೆ ಮಾಡಿದ್ದಾಳೆ. ಈ ವೇಳೆ ಆತ ಕೂಡ ಹಲ್ಲೆ ಮಾಡಿದ್ದು, ಈ ವೇಳೆ ಮಹಿಳೆ ತನ್ನ ಚಪ್ಪಲಿ ತೆಗೆದುಕೊಂಡು ಹೊಡೆಯಲು ಮುಂದಾಗಿದ್ದು, ಈತ ಕೂಡ ಚಪ್ಪಲಿ ತೆಗೆದು ಹೊಡೆಯಲು ಮುಂದಾಗಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಟ್ರಂಪ್ ಇನ್ನಿಲ್ಲ ಪೋಸ್ಟ್‌: ನಿಜವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಆಗಿದ್ದೇನು