Publish Date: Thu, 12 Feb 2026 (08:47 IST)
Updated Date: Thu, 12 Feb 2026 (08:53 IST)
ಬೆಂಗಳೂರು: ರಾಜ್ಯದಲ್ಲಿ ಇಂದು ಹವಾಮಾನದಲ್ಲಿ ಮತ್ತೆ ಬದಲಾವಣೆಯಾಗಲಿದೆ. ಇಂದು ವಿಪರೀತ ಬಿಸಲಿರಲಿದೆ. ಇಂದಿನ ಹವಾಮಾನ ವರದಿ ಇಲ್ಲಿದೆ ನೋಡಿ.
ನಿನ್ನೆ ರಾಜ್ಯದ ತಾಪಮಾನ ಸರಾಸರಿ ಕನಿಷ್ಠ 13 ಡಿಗ್ರಿಯವರೆಗೆ ಬಂದಿತ್ತು. ಆದರೆ ಹಗಲು ಕೆಲವೆಡೆ ಭಾಗಶಃ ಮೋಡ ಕಂಡುಬಂದಿತ್ತು. ಆದರೆ ಇಂದಿನಿಂದ ಹವಾಮಾನದಲ್ಲಿ ಮತ್ತಷ್ಟು ಬದಲಾವಣೆಯಾಗಲಿದೆ. ಇಂದು ಬಿಸಿಲಿನ ಝಳ ಹೆಚ್ಚಲಿದೆ.
ಇಂದು ರಾಜ್ಯದ ಸರಾಸರಿ ಗರಿಷ್ಠ ತಾಪಮಾನ 28 ಡಿಗ್ರಿಗೆ ಏರಿಕೆಯಾಗಲಿದ್ದು ಕನಿಷ್ಠ ತಾಪಮಾನ 14 ಡಿಗ್ರಿಯಿರಲಿದೆ. ಹಗಲಿಡೀ ಭಾರೀ ಬಿಸಿಲಿರಲಿದೆ. ಆದರೆ ರಾತ್ರಿ ಚಳಿಯೂ ಕಂಡುಬರಲಿದೆ. ಹಾಗಿದ್ದರೂ ಚಳಿಯ ತೀವ್ರತೆ ಕಳೆದ ವಾರಕ್ಕೆ ಹೋಲಿಸಿದರೆ ಕಡಿಮೆಯಾಗಲಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ಹಗಲು ಬಿಸಿಲಿನ ಝಳ ಹೆಚ್ಚಾಗುತ್ತಿದೆ. ಕರಾವಳಿ ಜಿಲ್ಲೆಗಳಲ್ಲಂತೂ ಇಂದು ಗರಿಷ್ಠ ತಾಪಮಾನ 35 ಡಿಗ್ರಿಯವರೆಗೆ ತಲುಪಲಿದೆ. ವಾರಂತ್ಯಕ್ಕೆ ಬಿಸಿಲಿನ ಬೇಗೆ ಹೆಚ್ಚಾಗಲಿದ್ದು, ಬೇಸಿಗೆಯ ಛಾಯೆ ಕಂಡುಬರಲಿದೆ.