Publish Date: Tue, 10 Feb 2026 (08:29 IST)
Updated Date: Tue, 10 Feb 2026 (08:31 IST)
ಬೆಂಗಳೂರು: ರಾಜ್ಯದಲ್ಲಿ ಈಗ ಚಳಿ ಮತ್ತು ಬಿಸಿಲು ಎರಡೂ ಕಂಡುಬರುತ್ತಿದೆ. ಇಂದು ರಾಜ್ಯದಲ್ಲಿ ಮಳೆ ಸಾಧ್ಯತೆಯಿದೆಯಾ, ಹವಾಮಾನ ವರದಿ ಹೇಗಿರಲಿದೆ ಇಲ್ಲಿದೆ ವರದಿ.
ಇಂದಿನ ಹವಾಮಾನ ವರದಿಗಳ ಪ್ರಕಾರ ಮಳೆ ಸಾಧ್ಯತೆಯಿಲ್ಲ. ಆದರೆ ಕೆಲವೆಡೆ ಭಾಗಶಃ ಮೋಡ ಕವಿದ ವಾತಾವರಣವಿರುವುದು ಎಂದು ವರದಿಗಳು ಹೇಳುತ್ತಿವೆ. ಉಳಿದಂತೆ ಬಹುತೇಕ ಕಡೆ ಹಗಲು ಉರಿ ಬಿಸಿಲು ಕಂಡುಬರಲಿದೆ.
ಆದರೆ ಈಗಲೂ ಚಳಿಯ ಪ್ರಭಾವ ಕಡಿಮೆಯಾಗಿಲ್ಲ. ರಾಜ್ಯ ರಾಜಧಾನಿ ಬೆಂಗಳೂರು, ಚಿಕ್ಕಮಗಳೂರು, ಕೊಡಗು, ಹಾಸನ ಸೇರಿದಂತೆ ಬಹುತೇಕ ಕಡೆ ರಾತ್ರಿ ಮತ್ತು ಬೆಳಿಗ್ಗೆ ಭಾರೀ ಚಳಿ ಮತ್ತು ಮಂಜು ಕಂಡುಬರುತ್ತಿದೆ. ಆದರೆ ಹಗಲು ಈ ಜಿಲ್ಲೆಗಳಲ್ಲೂ ಇಂದು ಬಿಸಿಲು ಕಂಡುಬರಲಿದೆ.
ಸದ್ಯಕ್ಕೆ ರಾಜ್ಯದಲ್ಲಿ ಮಳೆಯ ಸಾಧ್ಯತೆಯಿಲ್ಲ ಎಂದೇ ಹೇಳಬಹುದು. ಇಂದು ರಾಜ್ಯದ ಗರಿಷ್ಠ ತಾಪಮಾನ ಸರಾಸರಿ 29 ಡಿಗ್ರಿಯಷ್ಟಿರಲಿದೆ. ಕನಿಷ್ಠ ತಾಪಮಾನ ಇಂದು 17 ಡಿಗ್ರಿಯಷ್ಟು ಕಂಡುಬರಲಿದೆ. ಆದರೆ ತಾಪಮಾನದಲ್ಲಿ ಮುಂದಿನ ಎರಡು ದಿನ ಮತ್ತಷ್ಟು ಇಳಿಕೆಯಾಗುವ ಸಂಭವವಿದೆ ಎಂದು ಮುನ್ಸೂಚನೆಯಿದೆ.