Select Your Language

Notifications

webdunia
webdunia
webdunia
webdunia

Karnataka Weather: ರಾಜ್ಯದಲ್ಲಿ ಇಂದು ಇಲ್ಲಿ ಬಿಸಿಲು, ಇಲ್ಲಿ ಮಾತ್ರ ಮಳೆ

Karnataka Rain
ಬೆಂಗಳೂರು: ಕರ್ನಾಟಕದಲ್ಲಿ ಈಗ ಮುಂಗಾರು ಮಳೆ ಕೊಂಚ ಕ್ಷೀಣವಾಗಿದೆ ಎಂದೇ ಹೇಳಬಹುದು. ಇಂದು ರಾಜ್ಯದ ಬಹುತೇಕ ಕಡೆಗಳಲ್ಲಿ ಬಿಸಿಲಾದರೆ ಕೆಲವು ಜಿಲ್ಲೆಯಲ್ಲಿ ಮಾತ್ರ ಮಳೆಯಾಗುವ ಸೂಚನೆಯಿದೆ. ಇಂದಿನ ಹವಾಮಾನ ವರದಿ ಇಲ್ಲಿದೆ ನೋಡಿ.
 

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಈಗ ಬಿಸಿಲಿನ ವಾತಾವರಣವಿದೆ. ಕೆಲವೊಮ್ಮೆ ಮಾತ್ರ ಸಣ್ಣ ಮೋಡ ಕಂಡಬರುತ್ತಿದೆ. ಅದರ ಹೊರತಾಗಿ ಮಳೆ ಕಡಿಮೆಯಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ನಿರಂತರ ಮಳೆಯಾಗುತ್ತಿದೆ.

ಈ ಬಾರಿ ಅತೀ ಹೆಚ್ಚು ಮಳೆಯಾಗುತ್ತಿರುವುದು ದಕ್ಷಿಣ ಕನ್ನಡ ಜಿಲ್ಲೆ ಬಿಟ್ಟರೆ ಉಡುಪಿ ಜಿಲ್ಲೆಗೆ ಮಾತ್ರ ಎನ್ನಬಹುದು. ಈ ಎರಡು ಜಿಲ್ಲೆಗಳಿಗೆ ಇಂದೂ ಮಳೆಯಾಗುವ ಸೂಚನೆಯಿದೆ. ಉಳಿದ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ.

ಬೆಂಗಳೂರು, ಚಿಕ್ಕಮಗಳೂರು, ಹಾಸನ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ವಿಜಯಪುರ, ಕಲಬುರಗಿ, ಗದಗ, ಬಾಗಲಕೋಟೆ, ಚಿತ್ರದುರ್ಗ, ಕೋಲಾರ, ತುಮಕೂರು, ಚಾಮರಾಜನಗರ, ಮೈಸೂರು, ಮಂಡ್ಯ, ಹಾವೇರಿ, ರಾಯಚೂರು ಜಿಲ್ಲೆಗಳಲ್ಲಿ ಇಂದು ಬಿಸಿಲಿನ ವಾತಾವರಣವಿರಲಿದೆ ಎಂದು ಹವಾಮಾನ ವರದಿ ಹೇಳಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

Chinnaswamy: ಹರಿದ ಬಟ್ಟೆ, ಕೈಯಿಂದ ಎದೆ ಮುಚ್ಚಿಕೊಂಡಿದ್ದ ಯುವತಿ: ಚಿನ್ನಸ್ವಾಮಿಯಲ್ಲಿ ನಡೆದ ಶಾಕಿಂಗ್ ಘಟನೆಯಿದು