ಬೆಂಗಳೂರು: ರಾಜ್ಯದಲ್ಲಿ ತಾಪಮಾನ ದಿನೇ ದಿನೇ ಇಳಿಕೆಯಾಗುತ್ತಿದ್ದು ವಿಪರೀತ ಚಳಿ ಕಂಡುಬರುತ್ತಿದೆ. ವಾರಂತ್ಯಕ್ಕೆ ತಾಪಮಾನದಲ್ಲಿ ಭಾರೀ ಇಳಿಕೆಯಾಗಲಿದ್ದು ಚಳಿ ಇನ್ನಷ್ಟು ತೀವ್ರವಾಗಲಿದೆ.
ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 13-14 ಡಿಗ್ರಿಯೊಳಗಿದೆ. ಈ ವಾರಂತ್ಯಕ್ಕೆ ರಾಜ್ಯದ ಕನಿಷ್ಠ ತಾಪಮಾನ ಸರಾಸರಿ 14 ಡಿಗ್ರಿಯವರೆಗೆ ಇಳಿಕೆಯಾಗಲಿದೆ ಎಂದು ಹವಾಮಾನ ವರದಿಗಳು ಸೂಚಿಸುತ್ತಿವೆ. ಗರಿಷ್ಠ ತಾಪಮಾನ 26 ಡಿಗ್ರಿಯಷ್ಟಿರಲಿದೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 20-19 ಡಿಗ್ರಿಯಷ್ಟಿರಲಿದೆ. ಚಿಕ್ಕಮಗಳೂರು, ಕೊಡಗು, ಹಾಸನ, ಬೀದರ್ ಜಿಲ್ಲೆಗಳಲ್ಲಿ ಇಂದು ಕನಿಷ್ಠ ತಾಪಮಾನ 12 ಡಿಗ್ರಿಯವರೆಗೆ ಕುಸಿಯುವ ಸಾಧ್ಯತೆಯಿದೆ. ಕೋಲಾರ, ತಮಕೂರು, ಚಿತ್ರದುರ್ಗ, ಗದಗ, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ ಮೊದಲಾದ ಜಿಲ್ಲೆಗಳಲ್ಲಿ 14 ಡಿಗ್ರಿಯಷ್ಟಿರಲಿದೆ.
ಬೆಂಗಳೂರು, ಮೈಸೂರು, ಮಂಡ್ಯ, ಹಾವೇರಿ, ಚಿತ್ರದುರ್ಗ, ಕಲಬುರಗಿ, ಯಾದಗಿರಿ, ವಿಜಯಪುರ, ಬಳ್ಳಾರಿ ಜಿಲ್ಲೆಗಳಲ್ಲಿ 14-15 ಡಿಗ್ರಿಯಷ್ಟಿರಲಿದೆ. ಉಳಿದಂತೆ ಹಲವು ಜಿಲ್ಲೆಗಳಲ್ಲಿ ತಾಪಮಾನ 15-16 ಡಿಗ್ರಿಯಷ್ಟಿರಲಿದೆ.