ಬೆಂಗಳೂರು: ರಾಜ್ಯದಲ್ಲಿ ಈಗ ವಿಪರೀತ ಚಳಿಯ ವಾತಾವರಣವಿದೆ. ಇಂದು ರಾಜ್ಯದ ಹವಾಮಾನ ಹೇಗಿರಲಿದೆ. ಇಲ್ಲಿದೆ ಇಂದಿನ ಹವಾಮಾನ ವರದಿ.
ಕಳೆದ ಒಂದು ವಾರದಿಂದ ರಾಜ್ಯದ ಸರಾಸರಿ ಕನಿಷ್ಠ ತಾಪಮಾನ 15-16 ಡಿಗ್ರಿಯಷ್ಟಿದೆ. ಇಂದೂ ಕೂಡಾ ರಾಜ್ಯದ ಸರಾಸರಿ ಕನಿಷ್ಠ ತಾಪಮಾನ 15 ಡಿಗ್ರಿಯಷ್ಟಿರಲಿದೆ ಎಂದು ವರಿದಗಳು ಸೂಚಿಸುತ್ತಿವೆ. ವಾರಂತ್ಯಕ್ಕೆ ಚಳಿ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಹೆಚ್ಚು ಚಳಿಯಿರಲ್ಲ. ಆದರೆ ಚಿಕ್ಕಮಗಳೂರು, ಹಾಸನ, ಕೊಡಗು, ಬೀದರ್, ಹುಬ್ಬಳ್ಳಿ, ಧಾರವಾಡ, ಗದಗ, ಬೀದರ್ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 12-13 ಡಿಗ್ರಿಯಷ್ಟಿರಲಿದ್ದು, ವಿಪರೀತ ಚಳಿ ಕಂಡುಬರುವುದು.
ಮೈಸೂರು, ಮಂಡ್ಯ, ಬೆಂಗಳೂರು, ರಾಮನಗರ, ಚಾಮರಾಜನಗರ, ಬೆಳಗಾವಿ, ಕಲಬುರಗಿ, ಯಾದಗಿರಿ, ಶಿವಮೊಗ್ಗ, ಬಳ್ಳಾರಿ, ರಾಯಚೂರು, ಚಿತ್ರದುರ್ಗ ಮೊದಲಾದ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 14-16 ಡಿಗ್ರಿಯೊಳಗಿರಲಿದೆ.