Publish Date: Mon, 16 Feb 2026 (08:45 IST)
Updated Date: Mon, 16 Feb 2026 (08:48 IST)
ಬೆಂಗಳೂರು: ರಾಜ್ಯದಲ್ಲಿ ಕಳೆದ ವಾರ ವಿಪರೀತ ಬಿಸಿಲಿನ ಜೊತೆಗೆ ಚಳಿಯೂ ಕಂಡುಬಂದಿತ್ತು. ಈ ವಾರ ಬಿಸಿಲಿರುತ್ತಾ, ಚಳಿ ಇರುತ್ತಾ ಇಲ್ಲಿದೆ ವಾರದ ಹವಾಮಾನ ವರದಿ.
ಕಳೆದ ವಾರದಲ್ಲಿ ಹವಾಮಾನದಲ್ಲಿ ಸಾಕಷ್ಟು ಏರಿಳಿತಗಳು ಕಂಡುಬಂದಿತ್ತು. ರಾತ್ರಿ ಚಳಿಯಿದ್ದರೂ ಹಗಲು ವಿಪರೀತ ಬಿಸಿಲಿನ ವಾತಾವರಣವಿತ್ತು. ವಾರಂತ್ಯದ ವೇಳೆಗೆ ಗರಿಷ್ಠ ತಾಪಮಾನದಲ್ಲಿ ಏರಿಕೆ ಕಂಡು 30 ಡಿಗ್ರಿ ದಾಟಿತ್ತು. ಈ ವಾರವೂ ಬಿಸಿಲು ಮತ್ತು ಚಳಿ ಮುಂದುವರಿಯಲಿದೆ.
ಈ ವಾರ ವಾರಂತ್ಯದವರೆಗೂ ಗರಿಷ್ಠ ತಾಪಮಾನ 30 ಡಿಗ್ರಿ ಆಸುಪಾಸಿನಲ್ಲೇ ಇರಲಿದೆ. ವಾರಂತ್ಯದಲ್ಲಿ ಗರಿಷ್ಠ ತಾಪಮಾನ ಕೊಂಚ ಕಡಿಮೆಯಾದರೂ ಬಿಸಿಲಿನ ಝಳ ಮುಂದುವರಿಯಲಿದೆ. ಕನಿಷ್ಠ ತಾಪಮಾನ 16 ರಿಂದ 17 ಡಿಗ್ರಿ ಆಸುಪಾಸಿನಲ್ಲಿರಲಿದೆ.
ರಾಜ್ಯದಲ್ಲಿ ಒಣ ಹವೆ ಇನ್ನೂ ಒಂದು ವಾರ ಕಾಲ ಇದೇ ರೀತಿ ಮುಂದುವರಿಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 34 ರಿಂದ 35 ಡಿಗ್ರಿಯಷ್ಟು ಕಂಡುಬರುವುದು. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಈ ವಾರ ಗರಿಷ್ಠ ತಾಪಮಾನ 30 ಡಿಗ್ರಿ ಆಸುಪಾಸಿನಲ್ಲೇ ಇರಲಿದೆ.