Select Your Language

Notifications

webdunia
webdunia
webdunia
webdunia

ಮಾಜಿ ಸಚಿವ ಅಂಬರೀಶ್ ವರ್ತನೆಗೆ ಕಾಂಗ್ರೆಸ್ ನಾಯಕರ ಆಕ್ರೋಶ

ಮಾಜಿ ಸಚಿವ ಅಂಬರೀಶ್ ವರ್ತನೆಗೆ ಕಾಂಗ್ರೆಸ್ ನಾಯಕರ ಆಕ್ರೋಶ
ಬೆಂಗಳೂರು , ಬುಧವಾರ, 15 ನವೆಂಬರ್ 2017 (15:52 IST)
ವಿಧಾನಮಂಡಲದ ಅಧಿವೇಶನಕ್ಕೆ ಗೈರುಹಾಜರಾಗಿ ನಟಿಯೊಬ್ಬಳೊಂದಿಗೆ ಡಾನ್ಸ್ ಮಾಡುತ್ತಿರುವ ಶಾಸಕ ಅಂಬರೀಷ್ ವರ್ತನೆ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗಿಸಿದೆ.  
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶದಲ್ಲಿ ಪಾಲ್ಗೊಂಡು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದೇ ನಟಿಯೊಂದಿಗೆ ನೃತ್ಯದಲ್ಲಿ ತೊಡಗಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. 
 
ನಟ-ಕಂ-ರಾಜಕಾರಣಿಯಾಗಿರುವ ಅಂಬರೀಶ್ ತಮ್ಮ ಸ್ಥಾನಕ್ಕೆ ಹಿಂತಿರುಗುವ ಮುನ್ನ ವೇದಿಕೆಯಲ್ಲಿ ಮಹಿಳೆಯೊಂದಿಗೆ ನೃತ್ಯ ಮಾಡಿರುವುದು ವಿಡಿಯೋದಲ್ಲಿ ವೈರಲ್ ಆಗಿದೆ. ಅಂಬರೀಷ್ ಅವರ ಇಂತಹ ವರ್ತನೆ ಮೊದಲನೆಯದಲ್ಲ ಎನ್ನಲಾಗಿದೆ.
 
ಕಳೆದ 2015 ರಲ್ಲಿ ಅಂಬರೀಶ್ ಅವರು ಕಾಂಗ್ರೆಸ್ ಶಾಸಕ ಎಸ್.ಎಸ್. ಮಲ್ಲಿಖರ್ಜುನ್‌ರೊಂದಿಗೆ ವಿಧಾನಸಭೆಯ ಅಧಿವೇಶನದಲ್ಲಿ ವಾಟ್ಸಪ್‌ನಲ್ಲಿ ನೃತ್ಯದ ವೀಡಿಯೊವನ್ನು ವೀಕ್ಷಿಸುವಾಗ ರೆಡ್ ಹ್ಯಾಂಡಾಗಿ ಸಿಕ್ಕು ಬಿದ್ದಿದ್ದರು. 
 
2014 ರಲ್ಲಿ, ಹಮ್ಮಾ ಹಮ್ಮಾ ಹಾಡಿಗೆ ನೃತ್ಯ ಮಾಡುತ್ತಿರುವ ವೀಡಿಯೋ ಮತ್ತು ಬಾರ್‌ನಲ್ಲಿ ಯುವತಿಯನ್ನು ಚುಂಬಿಸುತ್ತಿದ್ದ ಚಿತ್ರ ವೈರಲ್ ಆಗಿ ಹೋಗಿತ್ತು.
 
ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಂಬರೀಷ್, ಮತ್ತೊಬ್ಬ ಕಾಂಗ್ರೆಸ್ ನಾಯಕಿ ರಮ್ಯ ಅವರೊಂದಿಗೆ ವಿವಾದದಲ್ಲಿ ಸಿಲುಕಿ ಸುದ್ದಿಯಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಏನಾಗಿದೆ ನಿಮಗೆ ಕಲಾಪಕ್ಕೆ ಯಾಕೆ ಗೈರು: ಶಾಸಕ, ಸಚಿವರಿಗೆ ಸಿಎಂ ಕ್ಲಾಸ್