Select Your Language

Notifications

webdunia
webdunia
webdunia
webdunia

ಕಪ್ಪು ಹಣದ ತಾಂಡವ ನೃತ್ಯ: ಒಬ್ಬನ ಹೆಸ್ರಲ್ಲಿ 700 ಬೇನಾಮಿ ಕಂಪೆನಿಗಳು

ಕಪ್ಪು ಹಣದ ತಾಂಡವ ನೃತ್ಯ: ಒಬ್ಬನ ಹೆಸ್ರಲ್ಲಿ 700 ಬೇನಾಮಿ ಕಂಪೆನಿಗಳು
ಮುಂಬೈ , ಶನಿವಾರ, 1 ಏಪ್ರಿಲ್ 2017 (15:30 IST)
ದೇಶದ 16 ರಾಜ್ಯಗಳ 100ಕ್ಕೂ ಹೆಚ್ಚು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿ 2300 ಬೇನಾಮಿ ಕಂಪೆನಿಗಳನ್ನು ಪತ್ತೆ ಹಚ್ಚಿದ್ದಾರೆ. ಅದರಲ್ಲಿ ಒಬ್ಬನ ಹೆಸರಲ್ಲಿ 700 ಬೇನಾಮಿ ಕಂಪೆನಿಗಳಿರುವುದು ಆಘಾತಕ್ಕೆ ಕಾರಣವಾಗಿದೆ.
 
ಒಬ್ಬ ವ್ಯಕ್ತಿಯ ಹೆಸರಲ್ಲಿ 700 ಬೇನಾಮಿ ಕಂಪೆನಿಗಳು ಪತ್ತೆಯಾಗಿದ್ದು, ಅಚ್ಚರಿಯ ವಿಷಯವೆಂದರೆ 700 ಬೇನಾಮಿ ಕಂಪೆನಿಗಳು ಒಂದೇ ವಿಳಾಸವನ್ನು ಹೊಂದಿರುವುದು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
 
ಎನ್‌ಸಿಪಿ ಮುಖಂಡ ಛಗನ್ ಭುಜಬಲ್ ಹೆಸರಲ್ಲಿ 46 ಕೋಟಿ ರೂಪಾಯಿಗಳು ಎಂಟ್ರಿಯಾಗಿರುವುದು ಕಂಡು ಬಂದಿದೆ. ರಾಜಕಾರಣಿಗಳು ಬೇನಾಮಿ ಕಂಪೆನಿಗಳನ್ನು ಆರಂಭಿಸಿ ಕಪ್ಪು ಹಣದ ವರ್ಗಾವಣೆಯಲ್ಲಿ ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ನೋಯ್ಡಾದ ಮುಖ್ಯ ಇಂಜಿನಿಯರ್ ಯಾದವ್ ಸಿಂಗ್, ದೇಶದ ಮೆಟ್ರೋ ನಗರಗಳಲ್ಲಿ 100 ಕೋಟಿಗೂ ಹೆಚ್ಚು ಬೇನಾಮಿ ಆಸ್ತಿ ಹೊಂದಿರಬಹುದು ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜಾಫರ್ ಷರೀಫ್ ಬಿಜೆಪಿ ಸೇರ್ಪಡೆ ಮಾಧ್ಯಮಗಳ ಸೃಷ್ಟಿ: ಸಿಎಂ