Publish Date: Fri, 20 Mar 2026 (09:17 IST)
Updated Date: Fri, 20 Mar 2026 (09:19 IST)
ಬೆಂಗಳೂರು: ಸರ್ಕಾರೀ ಅಧಿಕಾರಿಗಳ ವರ್ಗಾವಣೆ ಮಾಡೋದು ಅಲ್ಲ ನಿಮ್ಮ ಕೆಲಸ ಬೇರೆಯೇ ಇದೆ ಎಂದು ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ಕ್ಲಾಸ್ ತೆಗೆದುಕೊಂಡಿದೆ.
ಸಿಎಂ ಕಚೇರಿಯಿಂದ ವರ್ಗಾವಣೆ ಆದೇಶ ಬಂದಿರುವುದನ್ನು ಪ್ರಶ್ನಿಸಿ ಬೆಸ್ಕಾಂ ಎಇ ಚೇತನ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಸಿಎಂ ಸಿದ್ದರಾಮಯ್ಯಗೆ ಕ್ಲಾಸ್ ತೆಗೆದುಕೊಂಡಿದೆ. ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹಂತದ ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಹೈಕೋರ್ಟ್ ಚಾಟಿ ಬೀಸಿದೆ.
ಮುಖ್ಯಮಂತ್ರಿಗಳಿಗೆ ನೌಕರರ ವರ್ಗಾವಣೆಗಿಂತ ಮಾಡಬೇಕಾದ ಬೇರೆ ಬೇಕಾದಷ್ಟು ಉತ್ತಮ ಕೆಲಸಗಳಿವೆ. ಸರ್ಕಾರಿ ನೌಕರರ ವರ್ಗಾವಣೆ ವಿಚಾರ ಆಯಾ ಇಲಾಖೆಗೇ ಬಿಟ್ಟುಬಿಡಬೇಕು. ಮುಖ್ಯಮಂತ್ರಿಗಳ ಕಚೇರಿ ವರ್ಗಾವಣೆ ವಿಚಾರದ ಬಗ್ಗೆ ತಲೆ ಹಾಕಬಾರದು. ಇದಕ್ಕೆ ಮುಖ್ಯಮಂತ್ರಿಗಳು ಸಮಯ ವಿನಿಯೋಗಿಸಬಾರದು ಎಂದಿದೆ.
ಸಿಎಂ ಕಚೇರಿ ನೀಡುವ ವರ್ಗಾವಣೆ ಪತ್ರದ ಬಗ್ಗೆ ಮುಖ್ಯ ಕಾರ್ಯದರ್ಶಿಗಳಿಂದಲೂ ಕೋರ್ಟ್ ಸ್ಪಷ್ಟನೆ ಕೇಳಿತ್ತು. ಇದಕ್ಕೆ ಉತ್ತರಿಸಿದ್ದ ಅವರು ಸಿಎಂ ಕಚೇರಿಯಿಂದ ಕೇವಲ ಟಿಪ್ಪಣಿ ನೀಡಲಾಗುತ್ತದಷ್ಟೇ. ಆದೇಶಗಳನ್ನು ಸಂಬಂಧಪಟ್ಟ ಇಲಾಖೆಗಳೇ ನೀಡುತ್ತದೆ ಎಂದಿದ್ದಾರೆ.