Select Your Language

Notifications

webdunia
webdunia
webdunia
webdunia

ಪಟಾಕಿ ಬ್ಯಾನ್: ಈ ಪಟಾಕಿಗೆ ಮಾತ್ರ ವಿನಾಯ್ತಿ!

ಪಟಾಕಿ ಬ್ಯಾನ್: ಈ ಪಟಾಕಿಗೆ ಮಾತ್ರ ವಿನಾಯ್ತಿ!
ಬೆಂಗಳೂರು , ಬುಧವಾರ, 11 ಅಕ್ಟೋಬರ್ 2023 (09:20 IST)
ಬೆಂಗಳೂರು: ಅತ್ತಿಬೆಲೆ ಪಟಾಕಿ ಗೋಡೌನ್ ದುರಂತ ದಬಳಿಕ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಡೇಂಜರ್ ಪಟಾಕಿಗಳಿಗೆ ನಿಷೇಧ ಹೇರಿದೆ.

ಇನ್ಮುಂದೆ ಮದುವೆ, ರಾಜಕೀಯ, ಸಭೆ, ಸಮಾರಂಭ, ಹಬ್ಬಗಳ ನಿಮಿತ್ತ ಅಪಾಯಕಾರಿ ಪಟಾಕಿ ಹೊಡೆಯುವ ಹಾಗಿಲ್ಲ ಎಂದು ಸರ್ಕಾರ ಆದೇಶಿಸಿದೆ. ಕೇವಲ ಹಸಿರು ಪಟಾಕಿಗಳನ್ನಷ್ಟೇ ಹೊಡೆಯಬಹುದು ಎಂದು ವಿನಾಯ್ತಿ ನೀಡಿದೆ.

ಮುಂದೆ ದೀಪಾವಳಿ ಹಬ್ಬ ಬರಲಿದ್ದು, ಇದರ ಬೆನ್ನಲ್ಲೇ ರಾಜ್ಯ ಸರ್ಕಾರದ ಆದೇಶ ಮಹತ್ವ ಪಡೆದಿದೆ. ನಿಯಮ ಉಲ್ಲಂಘಿಸಿ ಪಟಾಕಿ ಹೊಡೆದರೆ ಆಯೋಜಕರ ವಿರುದ್ಧ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೈತರನ್ನ ಇಲ್ಲಿಯವರೆಗೂ ಕಾಪಾಡಿಕೊಂಡು ಬಂದಿದ್ದೇವೆ-ಡಿಕೆಶಿ