Publish Date: Fri, 29 Sep 2023 (14:00 IST)
Updated Date: Fri, 29 Sep 2023 (14:13 IST)
ಇವತ್ತು ನಗರದಲ್ಲಿ ಶಾಂತಿಯುತ ಪ್ರತಿಭಟನೆ ಮಾಡ್ತಿದ್ದಾರೆ.ಪೊಲೀಸ್ ಭದ್ರತೆ ಹೆಚ್ಚಿಸಿದ್ದೇವೆ.ಅಂಗಡಿಗಳು ಓಪನ್ ಆಗಿವೆ.ವಾಹನಗಳು ಎಂದಿನಂತೆ ಓಡಾಡುತ್ತಿವೆ.ಶಾಂತಿಯುತ ಬಂದ್ ನಡೀತಾ ಇದೆ.ಮಧ್ಯಾಹ್ನ Cwma ಸಭೆ ನಡೆಯುತ್ತೆ.ರಾಜ್ಯದ ಪರವಾಗಿ ಅಧಿಕಾರಿಗಳು ಭಾಗಿಯಾಗ್ತಾರೆ.ಕಾನೂನು ತಜ್ಞರ ಜೊತೆ ಸಿಎಂ ಸಭೆ ಕರೆದಿದ್ದಾರೆ.ಯಾರೆಲ್ಲ ವಾದ ಮಂಡಿಸಿದ್ದಾರೆ ಅವರೆಲ್ಲ ಭಾಗಿಯಾಗ್ತಾರೆ.ಇವತ್ತಿನ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ.ಕೆಲವರು ನನ್ನ ಬೇಜವಾಬ್ದಾರಿ ಬಗ್ಗೆ ಮಾತನಾಡ್ತಾರೆ.ಅವರ ಹಾಗೆ ನಾನು ಮಾತನಾಡಲ್ಲ.ನನಗೆ ಅವರಿಗಿಂತ ಜವಾಬ್ದಾರಿ ಹೆಚ್ಚಿದೆ.ಜವಾಬ್ದಾರಿಯುತ ಸಚಿವನಾಗಿ ನಾನು ಮಾತನಾಡಬೇಕು.ಈ ಬಂದ್ ಎಲ್ಲ ಮುಗಿಯಲಿ, ನಾವು ಚರ್ಚೆ ಮಾಡ್ತೇವೆ.ಸಂಕಷ್ಟ ಸೂತ್ರ ಹೆಣೆಯುವ ಬಗ್ಗೆ ಮಾತನಾಡುತ್ತಿದ್ದೇವೆ.ಕಾನೂನು ತಜ್ಞರ ಜೊತೆ ಸಭೆ ನಡೆಯಲಿ.ಸಂಕಷ್ಟ ಸೂತ್ರ ನಾವು ರೆಡಿ ಮಾಡಿಕೊಳ್ಳುತ್ತೇವೆ.ಆ ಬಳಿಕ ಕೋರ್ಟ್,ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.