Publish Date: Fri, 06 Mar 2026 (09:23 IST)
Updated Date: Fri, 06 Mar 2026 (09:26 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ಮಂಡಿಸಲಿರುವ ದಾಖಲೆಯ ಬಜೆಟ್ ಗೆ ಕ್ಷಣಗಣನೆ ಶುರುವಾಗಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಸಿಎಂ ಬಜೆಟ್ ಮಂಡಿಸಲಿದ್ದಾರೆ.
ಇದು ಅವರ 17 ನೇ ಬಜೆಟ್ ಆಗಿರಲಿದೆ. ಇಂದಿನಿಂದ ಮಾರ್ಚ್ 27 ರವರೆಗೆ ಬಜೆಟ್ ಅಧಿವೇಶನ ನಡೆಯಲಿದೆ. 1995-96 ರಲ್ಲಿ ಮೊದಲ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ ಇಂದು 17 ನೇ ಬಜೆಟ್ ಮಂಡಿಸಲಿದ್ದಾರೆ. ಇಷ್ಟು ಬಾರಿ ಬಜೆಟ್ ಮಂಡಿಸಿದ ಏಕೈಕ ವ್ಯಕ್ತಿ ಅವರಾಗಲಿದ್ದಾರೆ.
ಇಂದು ಬೆಳಿಗ್ಗೆ 10.15 ಕ್ಕೆ ಬಜೆಟ್ ಮಂಡನೆ ಆರಂಭವಾಗಲಿದೆ. ಗ್ಯಾರಂಟಿಗಳಿಗೆ ಅನುದಾನ, ಸಾಲಗಳ ಹೊರೆಯನ್ನು ಸರಿದೂಗಿಸಿಕೊಂಡು ಬಜೆಟ್ ನಲ್ಲಿ ಹೇಗೆ ಹಣ ಹಂಚಿಕೆ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿದೆ.
ಇದರ ಜೊತೆಗೆ ಮೆಗಾ ಸಿಟಿ ಪ್ಲ್ಯಾನ್, ಟನೆಲ್ ರೋಡ್, ಡಬಲ್ ಡೆಕ್ಕರ್ ರೋಡ್ ಯೋಜನೆ ಜೊತೆಗೆ ಮೂಲಸೌಕರ್ಯಾಭಿವೃದ್ಧಿ, ಶಿಕ್ಷಣ, ಕೃಷಿ ವಲಯಕ್ಕೆ ಹೆಚ್ಚಿನ ಕೊಡುಗೆ ನಿರೀಕ್ಷಿಸಲಾಗಿದೆ.