Select Your Language

Notifications

webdunia
webdunia
webdunia
webdunia

Karnataka Weather: ಇಂದು ಈ ಜಿಲ್ಲೆಗಳಿಗೆ ಮತ್ತಷ್ಟು ಉರಿಬಿಸಿಲಿನ ನಿರೀಕ್ಷೆ

Karnataka Weather
ಬೆಂಗಳೂರು: ರಾಜ್ಯದಲ್ಲಿ ಮಾರ್ಚ್ ಮೊದಲ ವಾರದಿಂದಲೇ ಬಿಸಿಲಿನ ತಾಪ ಮೇರೆ ಮೀರಿದೆ. ಇಂದು ಮತ್ತಷ್ಟು ಜಿಲ್ಲೆಗಳಲ್ಲಿ ಉರಿಬಿಸಿಲಿನ ತಾಪ ಹೆಚ್ಚಾಗಲಿದೆ ಎಂದು ಹವಾಮಾನ ವರದಿಗಳು ಹೇಳಿವೆ.

ಈ ವಾರ ತಾಪಮಾನದಲ್ಲಿ ಮತ್ತಷ್ಟು ಏರಿಕೆಯಾಗಿದ್ದು ಹಗಲು ಹೊರಗೆ ಕಾಲಿಡಲಾಗದಷ್ಟು ಬಿಸಿಲಿನ ತಾಪ ಕಂಡುಬರುತ್ತಿದೆ. ಇಂದು ಕೂಡಾ ಹಲವು ಜಿಲ್ಲೆಗಳಲ್ಲಿ ಭಾರೀ ಬಿಸಿಲು ಕಂಡುಬರಲಿದ್ದು ಗರಿಷ್ಠ ತಾಪಮಾನ ಮತ್ತಷ್ಟು ಹೆಚ್ಚಾಗಲಿದೆ.

ರಾಜ್ಯಾದ್ಯಂತ ಇಂದೂ ಶುಷ್ಕ ವಾತಾವರಣವಿರಲಿದ್ದು, ಇಂದಿನ ಗರಿಷ್ಠ ತಾಪಮಾನ ಸರಾಸರಿ 33 ಡಿಗ್ರಿಯಷ್ಟು ಇರಲಿದೆ. ಕನಿಷ್ಠ ತಾಪಮಾನ ಇಂದು 19 ಡಿಗ್ರಿಯಷ್ಟಿರುವುದು. ಹುಬ್ಬಳ್ಳಿ, ಧಾರವಾಡ, ರಾಯಚೂರು, ಬೀದರ್, ಕಲಬುರಗಿ, ಉತ್ತರ ಕನ್ನಡ, ಬಳ್ಳಾರಿ ಜಿಲ್ಲೆಗಳಲ್ಲಿ ಇಂದು ಗರಿಷ್ಠ ತಾಪಮಾನ 36 ಡಿಗ್ರಿ ತಲುಪಲಿದೆ.

ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ, ಉಡುಪಿಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿಯಷ್ಟು ಕಂಡುಬರಬಹುದು. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿಯಷ್ಟು ಕಂಡುಬರಲಿದೆ. ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ 34 ಡಿಗ್ರಿಯಷ್ಟು ಗರಿಷ್ಠ ತಾಪಮಾನವಿರಲಿದೆ. ಕೋಲಾರ, ಹಾಸನ, ಕೊಡಗು, ಚಿಕ್ಕಮಗಳೂರು ಮೊದಲಾದ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 31-32 ಡಿಗ್ರಿಯಷ್ಟಿರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೀವನಾಂಶ ಬೇಕೆಂದ ಪತ್ನಿಯನ್ನೇ ಇಹಲೋಕಕ್ಕೆ ಕಳುಹಿಸಿದ ಪತಿ, ಏನಿದು ಕೇಸ್‌