Daily Horoscope

Select Your Language

Notifications

webdunia
webdunia
webdunia
webdunia

ಜೀವನಾಂಶ ಬೇಕೆಂದ ಪತ್ನಿಯನ್ನೇ ಇಹಲೋಕಕ್ಕೆ ಕಳುಹಿಸಿದ ಪತಿ, ಏನಿದು ಕೇಸ್‌

Dharwad Hit Run Case
Photo Credit X
ಧಾರವಾಡ: ಇಲ್ಲಿನ ಸವದತ್ತಿ ರಸ್ತೆಯಲ್ಲಿ ನಡೆದ ಹಿಟ್ ಆಂಡ್ ರನ್ ಕೇಸ್ ಭೇದಿಸಿದ ಪೊಲೀಸರಿಗೆ ಇದೊಂದು ಪ್ರೀ ಪ್ಲ್ಯಾನ್‌ಡ್‌ ಮರ್ಡರ್ ಎಂದು ತಿಳಿದುಬಂದಿದೆ. 

ವಿಡಿಯೋ ನೋಡಿದಾಗ  ಥಾರ್ ಮಹಿಳೆಗೆ ಡಿಕ್ಕಿ ಹೊಡೆಯುತಿದ್ದ ದೃಶ್ಯ ಬಸ್ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಡಿಕ್ಕಿಯ ರಭಸಕ್ಕೆ ಲಲಿತಾ ಹತ್ತರಗಿ ಎಂಬವರು ಸಾವನ್ನಪ್ಪಿದರು. ಪ್ರಕರಣ ಭೇದಿಸಿದ ಪೊಲೀಸರಿಗೆ ಇದು ಕೊಲೆ ಎಂದು ತಿಳಿದುಬಂದಿದ್ದು, ಆಕೆಯ ಪತಿಯೇ ಆರೋಪಿ ಎಂಬುದು ಬಯಲಾಗಿದೆ. 

 ಉದಯ ಹತ್ತರಗಿ ಮತ್ತು ಲಲಿತಾ ಹತ್ತರಗಿ 10 ವರ್ಷದ ಹಿಂದೆ ಮದುವೆಯಾಗಿದ್ದರು. ಕಾರಣಾಂತರಗಳಿಂದ ಇಬ್ಬರೂ ಬೇರೆ ಬೇರೆಯಾಗಿದ್ದರು. ಲಲಿತಾ ತನಗೆ ಜೀವನಾಂಶ ಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದಳು. 2024ರಲ್ಲಿ ಲಲಿತಾಳಿಗೆ ಉದಯ ಒಂದೂವರೆ ಎಕರೆ ಜಮೀನು ನೀಡಬೇಕು ಎಂದು ಕೋರ್ಟ್ ಕೂಡ ಆದೇಶ ಮಾಡಿತ್ತು. ಈ ವಿಚಾರಕ್ಕೆಯೇ ಕಲೆ ಮಾಡಲಾಗಿದೆ ಎನ್ನಲಾಗಿದೆ. 

ಕೋರ್ಟ್ ಆದೇಶದ ಬಳಿಕ ಉದಯ್‌ಗೆ ಕರೆ ಮಾಡಿ, ತನ್ನ ಪಾಲಿನ ಜೀವನಾಂಶ ನೀಡುವಂತೆ ಲಲಿತಾ ಹೇಳುತ್ತಿದ್ದರು.  ‌ ಈ ಇಬ್ಬರೂ ಬೇರೆ ಬೇರೆಯಾದ ನಂತರ ಲಲಿತಾ ಧಾರವಾಡ ತಾಲೂಕಿನ ಸೋಮಾಪುರದಲ್ಲಿ ವಾಸವಾಗಿದ್ದಳು. 

ಈ ಸಂಬಂಧ ಉದಯ್ ತನ್ನ ಸಂಬಂಧಿ ನಾಗಪ್ಪ ಪಡೇಕರ ಜೊತೆ ಚರ್ಚೆ ಮಾಡಿ ಲಲಿತಾಳ ಕಥೆ ಮುಗಿಸಲು ನಿರ್ಧಾರ ಮಾಡಿ, ₹40 ಲಕ್ಷ ಸುಪಾರಿ ಸಹ ಕೊಟ್ಟಿದ್ದ. ಪ್ಲ್ಯಾನ್ ಮಾಡಿ ಲಲಿತಾಳನ್ನು ಸವದತ್ತಿ ರಸ್ತೆ ಬಳಿ ಇರುವ ದುರ್ಗಾದೇವಿ ದೇವಸ್ಥಾನದ ಹತ್ತಿರ ಕರೆಯಿಸಿಕೊಂಡ ಉದಯ್ ಆಕೆಯನ್ನು ಥಾರ್ ವಾಹನ ಹಾಯಿಸಿ ಕೊಲೆ ಮಾಡುವಂತೆ ಸುಪಾರಿ ಕೊಟ್ಟವರಿಗೆ ಹೇಳಿದ್ದ. ‌

ಅದರಂತೆ ಸುಪಾರಿ ಕಿಲ್ಲರ್ಸ್ ಲಲಿತಾಳ ಮೇಲೆ ಥಾರ್ ವಾಹನ ಹಾಯಿಸಿ ಕೊಲೆ ಮಾಡಿದ್ದಾರೆ. ಆದರೆ ಮೇಲ್ನೋಟಕ್ಕೆ ಇದೊಂದು ಹಿಟ್ & ರನ್ ಎಂಬಂತೆ ಬಿಂಬಿಸಿದ್ದರು. ಆದರೆ, ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್ಸೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿತ್ತು. ಇದೇ ದೃಶ್ಯದ ಸಹಾಯದಿಂದ ಇದೀಗ ಈ ಇಡೀ ಕಥಾ ಹಂದರ ಬಯಲಾಗಿದೆ. ನಾಲ್ಕು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬುರ್ಖಾ ಧರಿಸಿ ಹೋಳಿ ಆಟವಾಡಲು ಹೋಗಿ ಕೇಸ್ ಹಾಕಿಸಿಕೊಂಡ ಐವರು