Publish Date: Thu, 05 Mar 2026 (15:12 IST)
Updated Date: Thu, 05 Mar 2026 (15:14 IST)
ಬೆಂಗಳೂರು: ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದಿಂದ ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಬೆಂಗಳೂರಿಗೆ ಬಂದಿಳಿದಿದ್ದಾರೆ.
ಪ್ರವಾಸಕ್ಕೆ, ಉದ್ಯೋಗಕ್ಕೆ, ಬೇರೆ ಬೇರೆ ಕಾರಣಗಳಿಂದ ದುಬೈಗೆ ತೆರಳಿರುವ ಸಾವಿರಾರು ಭಾರತೀಯರು ಅಲ್ಲಿ ಸಿಲುಕಿದ್ದರು. ದುಬೈನಲ್ಲಿ ಸಿಲುಕಿದ್ದ ಬಳ್ಳಾರಿ, ಚಿತ್ರದುರ್ಗದ ಪ್ರವಾಸಿಗರು ನಾಲ್ಕು ದಿನದ ಬಳಿಕ ಇಂದು ಬೆಳಗ್ಗೆ ಬೆಂಗಳೂರಿಗೆ ಸುರಕ್ಷಿತವಾಗಿ ವಾಪಸಾಗಿದ್ದಾರೆ.
ಬಳ್ಳಾರಿಯ 35 ಮಂದಿ ಹಾಗೂ ಚಿತ್ರದುರ್ಗ 15 ಮಂದಿ ಸೇರಿ 246 ಕನ್ನಡಿಗರು ಮಾ.4 ರಂದು ಶಾರ್ಜಾ ದಿಂದ ಕೊಚ್ಚಿನ್‍ಗೆ ಬಂದಿಳಿದಿದ್ದರು. 50 ಮಂದಿಗೆ ಅಲ್ಲಿಂದ ಬೆಂಗಳೂರಿಗೆ ಶಾಸಕ ಬಿ ನಾಗೇಂದ್ರ ಅವರು ವಿಮಾನದ ವ್ಯವಸ್ಥೆ ಮಾಡಿದ್ದರು. ಇಂದು ಬೆಳಗ್ಗೆ ಅವರೆಲ್ಲ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ಕೊಚ್ಚಿನ್‍ನಿಂದ ಬೆಂಗಳೂರಿಗೆ ಬಂದಿಳಿದ ಕನ್ನಡಿಗರನ್ನು ನಾಗೇಂದ್ರ ಅವರು ಬರಮಾಡಿಕೊಂಡಿದ್ದಾರೆ. ಶಾಸಕರ ಸಹಾಯವನ್ನು ಕನ್ನಡಿಗರು ಕೊಂಡಾಡಿದ್ದಾರೆ. ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸ್ಸಾಗಿದ್ದಕ್ಕೆ ಕನ್ನಡಿಗರು ಸಂತರಗೊಂಡಿದ್ದಾರೆ.