ಬೆಂಗಳೂರು: ಇತ್ತೀಚೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರನ್ನೇ ನಿಂದಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು ಇದರಲ್ಲಿ ಬೆಂಗಳೂರಿನ ಹೋಟೆಲ್ ಒಂದರ ಎಲ್ಇಡಿ ಸ್ಕ್ರೀನ್ ನಲ್ಲಿ ಕನ್ನಡಿಗರನ್ನೇ ಕೆಟ್ಟದಾಗಿ ನಿಂದಿಸುವ ಸಾಲುಗಳು ಬರುತ್ತವೆ.
ಕರ್ನಾಟಕ ಪೋರ್ಟ್ ಪೊಲಿಯೋ ಎಂಬ ಎಕ್ಸ್ ಪೇಜ್ ನಲ್ಲಿ ಈ ವಿಡಿಯೋ ಪ್ರಕಟಿಸಲಾಗಿದೆ. ಹೋಟೆಲ್ ಡಿಸ್ ಪ್ಲೇ ಬೋರ್ಡ್ ಎಂಬ ಪಬ್ ನಲ್ಲಿ ಈ ರೀತಿ ಮಾಡಲಾಗಿದೆ. ಹೋಟೆಲ್ ನ ಎಲ್ಇಡಿ ಸ್ಕ್ರೀನ್ ಮೇಲೆ ಕನ್ನಡಿಗರನ್ನು ಹೊಡೆಯಿರಿ ಎಂದು ಹಿಂದಿಯಲ್ಲಿ ಬರೆಯಲಾಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೇ ಬೆಂಗಳೂರು ಪೊಲೀಸರು ಚುರುಕಾಗಿ ಕ್ರಮ ಕೈಗೊಂಡಿದ್ದಾರೆ. ಇದೀಗ ಹೋಟೆಲ್ ಸಿಬ್ಬಂದಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಇನ್ನು, ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಕರ್ನಾಟಕದಲ್ಲೇ ಇದ್ದುಕೊಂಡು ಕನ್ನಡದ ಬಗ್ಗೆಯೇ ಈ ರೀತಿ ಬರೆದುಕೊಂಡು ಬ್ಯುಸಿನೆಸ್ ಮಾಡಲು ಇವರಿಗೆ ಎಷ್ಟು ಧೈರ್ಯವಿರಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.