ಇಸ್ಲಾಮಾಬಾದ್: ಆಪರೇಷನ್ ಸಿಂಧೂರ್ ನಡೆಸಿದ್ದ ಭಾರತೀಯ ಸೇನೆ ಪಾಕಿಸ್ತಾನದ ವಾಯುನೆಲೆಗಳ ಮೇಲೆ ದಾಳಿ ನಡೆಸಿತ್ತು. ಆದರೆ ಇದನ್ನು ಪಾಕಿಸ್ತಾನ ಇದುವರೆಗೆ ಒಪ್ಪಿಕೊಂಡಿರಲಿಲ್ಲ. ಆದರೆ ಈಗ ಪ್ರಧಾನಿ ಷರೀಫ್ ಅವರಿಂದಲೇ ಸತ್ಯ ಹೊರಬಂದಿದೆ.
ಆಪರೇಷನ್ ಸಿಂಧೂರ್ ಬಳಿಕ ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಪಾಕಿಸ್ತಾನ ಮುಟ್ಟಿಕೊಳ್ಳುವಂತೆ ದಾಳಿ ಮಾಡಿತು. ಪಾಕಿಸ್ತಾನದ ಪ್ರಮುಖ ವಾಯನೆಲೆಗಳ ಮೇಲೆಯೇ ಬಾಂಬ್ ಹಾಕಿ ಹಾನಿ ಮಾಡಿದೆ.
ಆದರೆ ಇದನ್ನು ಪಾಕಿಸ್ತಾನ ಇದುವರೆಗೆ ಬಹರಂಗವಾಗಿ ಒಪ್ಪಿಕೊಂಡಿರಲಿಲ್ಲ. ಆದರೆ ಈಗ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ರಾವಲ್ಪಿಂಡಿಯಲ್ಲಿರುವ ಪಾಕಿಸ್ತಾನದ ಪ್ರಮುಖ ವಾಯನೆಲೆ ನೂರ್ ಖಾನ್ ಏರ್ ಬೇಸ್ ಗೆ ಭಾರತ ಬಾಂಬ್ ಹಾಕಿದ್ದು ನಿಜ ಎಂದು ಷರೀಫ್ ಹೇಳಿದ್ದಾರೆ.
ರಾತ್ರಿ 2.30 ರ ವೇಳೆಗೆ ಸೇನಾ ಮುಖ್ಯಸ್ಥ ಆಸಿಫ್ ನೂರ್ ಕರೆ ಮಾಡಿದರು. ಹಿಂದೂಸ್ತಾನ್ ನ ಮಿಸೈಲ್ ಗಳು ನೂರ್ ಖಾನ್ ಏರ್ ಬೇಸ್ ಗೆ ದಾಳಿ ಮಾಡಿದೆ ಎಂದರು ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಯಿಂದ ನೂರ್ ಖಾನ್ ಏರ್ ಬೇಸ್ ಮೇಲೆ ದಾಳಿಯಾಗಿರುವುದು ಖಚಿತವಾಗಿದೆ.