ಜೋಧ್‌ಪುರ: ಟರ್ಕಿಯ ಸೇಬು ಅನ್ನು ಬಹಿಷ್ಕರಿಸಿದ ಬೆನ್ನಲ್ಲೇ ಇದೀಗ ಅಲ್ಲಿನ ಆಭರಣಕ್ಕೂ ಬಹಿಷ್ಕಾರ ವ್ಯಕ್ತವಾಗಿದೆ.
ಈಚೆಗಷ್ಟೇ ಭಾರತದ ಮೇಲಿನ ದಾಳಿಗೆ ಪಾಕಿಸ್ತಾನಕ್ಕೆ ಟರ್ಕಿ ಮುಕ್ತವಾಗಿ ಬೆಂಬಲಿಸಿದ ಬಳಿಕ ಭಾರತ ಪ್ರತೀಕಾರವನ್ನು ತೀರಿಸುತ್ತಿದೆ. ಈಗಾಗಲೇ ಟರ್ಕಿಯ ಪ್ರವಾಸವನ್ನು ರದ್ದುಗೊಳಿಸಿದ ಭಾರತ, ಅಲ್ಲಿನ ಸೇಬು ಆಮದಿಗೆ ಭಾರೀ ವಿರೋಧ ವ್ಯಕ್ತವಾಗಿದೆ. ಇದೀಗ ಜೋಧ್‌ಪುರದಲ್ಲಿ 'ಯುರೋಪ್‌ನ ದುಃಖ' ಎಂದು ಕರೆಯಲ್ಪಡುವ ದೇಶದ ಚಿನ್ನ ಮತ್ತು ವಜ್ರದ ಆಭರಣಗಳನ್ನು ಬಹಿಷ್ಕರಿಸಲಾಗುತ್ತಿದೆ.
ಜೋಧ್‌ಪುರ ಜ್ಯುವೆಲ್ಲರ್ಸ್ ಅಸೋಸಿಯೇಷನ್ ಟರ್ಕಿಯ ಆಭರಣಗಳನ್ನು ಮಾರಾಟ ಮಾಡದಿರಲು ನಿರ್ಧರಿಸಿದೆ. ನಗರದಲ್ಲಿ ಟರ್ಕಿಯ ಆಭರಣಗಳನ್ನು ಮಾರಾಟ ಮಾಡದಿರಲು ಸಂಘವು ಸರ್ವಾನುಮತದಿಂದ ನಿರ್ಧರಿಸಿದೆ ಎಂದು ಸಂಘದ ಅಧ್ಯಕ್ಷ ನವೀನ್ ಸೋನಿ ತಿಳಿಸಿದ್ದಾರೆ.
ಟರ್ಕಿಯ ಆಭರಣಗಳಿಗೆ ಇಲ್ಲಿ ಸಾಕಷ್ಟು ಬೇಡಿಕೆಯಿದೆ. ಆದರೆ ಇನ್ನು ಮುಂದೆ ಜೋಧ್‌ಪುರದಲ್ಲಿ ಮಾರಾಟ ಮಾಡಲಾಗುವುದಿಲ್ಲ ಎಂದು ಅವರು ಹೇಳಿದರು.
2024 ರಲ್ಲಿ, ಟರ್ಕಿಯಿಂದ ಭಾರತವು ಮುತ್ತುಗಳು, ಅಮೂಲ್ಯ ಕಲ್ಲುಗಳು, ಆಭರಣಗಳು ಮತ್ತು ಲೋಹಗಳ ಒಟ್ಟು ಆಮದು US $ 274.91 ಮಿಲಿಯನ್ ಆಗಿತ್ತು, ಅದು ಈಗ ಕಡಿಮೆಯಾಗುತ್ತಿದೆ ಎಂದು ನಂಬಲಾಗಿದೆ.