Select Your Language

Notifications

webdunia
webdunia
webdunia
webdunia

ಅಲ್ಪಸಂಖ್ಯಾತರಿಗೆ ಅನುದಾನ ಕೊಟ್ಟಿದ್ದಕ್ಕೆ ಹಲಾಲ್ ಎಂದ ಬಿಜೆಪಿವರಿಗೆ ಮಾನ ಮರ್ಯಾದೆ ಇಲ್ಲ ಎಂದ ಸಿದ್ದರಾಮಯ್ಯ

Siddaramaiah

Krishnaveni K

ಬೆಂಗಳೂರು , ಶನಿವಾರ, 8 ಮಾರ್ಚ್ 2025 (11:36 IST)
ಬೆಂಗಳೂರು: ಕರ್ನಾಟಕ ಬಜೆಟ್ ನಿನ್ನೆ ಘೋಷಣೆಯಾಗಿದ್ದು ಈ ಬಜೆಟ್ ನಲ್ಲಿ ಮಸ್ಲಿಂ ಸಮುದಾಯದವರಿಗೆ ಅನುದಾನ ಕೊಟ್ಟಿದ್ದಕ್ಕೆ ಬಿಜೆಪಿ ಹಲಾಲ್ ಬಜೆಟ್ ಎಂದು ಟೀಕಿಸಿದೆ. ಈ ರೀತಿ ಟೀಕಿಸಿದ ಬಿಜೆಪಿಯವರಿಗೆ ಮಾನ ಮರ್ಯಾದೆಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಈ ಬಜೆಟ್ ನಲ್ಲಿ ಅಲ್ಪ ಸಂಖ್ಯಾತರಿಗೆ ಹಲವು ಅನುದಾನಗಳನ್ನು ನೀಡಲಾಗಿದೆ. ವಿಶೇಷವಾಗಿ ಮುಸ್ಲಿಮರಿಗೆ ವಿವಾಹಕ್ಕೆ ಸಹಾಯಧನ, ಕಾಲೇಜುಗಳು, ಉರ್ದು ಶಾಲೆಗಳ ಆಧುನೀಕರಣ, ಸರ್ಕಾರಿ ಕಾಮಗಾರಿಯಲ್ಲಿ ಮೀಸಲಾತಿ ನೀಡಲಾಗಿದೆ.

ಈ ಅನುದಾನಗಳ ಬಗ್ಗೆ ಬಿಜೆಪಿ ಕಟು ಟೀಕೆ ನಡೆಸಿದೆ. ಇದು ಕಾಂಗ್ರೆಸ್ ನ ಓಲೈಕೆ ರಾಜಕಾರಣದ ಪರಮಾವಧಿ ಎಂದಿದೆ. ಅಲ್ಲದೆ, ಇದು ಕರ್ನಾಟಕ ಬಜೆಟ್ ಅಲ್ಲ, ಹಲಾಲ್ ಬಜೆಟ್ ಎಂದು ಟ್ವೀಟ್ ಮಾಡಿ ಟೀಕೆ ಮಾಡಿತ್ತು.

ಇದರ ಬಗ್ಗೆ ಈಗ ಸಿಎಂ ಟ್ವೀಟ್ ಮೂಲಕವೇ ಪ್ರತಿಕ್ರಿಯಿಸಿದ್ದು, ಕರ್ನಾಟಕದಲ್ಲಿ ಅಲ್ಪ ಸಂಖ್ಯಾತರು ಎಂದರೆ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನರು, ಬೌದ್ಧರು ಎಲ್ಲಾ ಸಮುದಾಯ ಬರುತ್ತದೆ. ರಾಜ್ಯದ ಬಜೆಟ್ ಗಾತ್ರ 4.09 ಲಕ್ಷ ಕೋಟಿ. ಇದರಲ್ಲಿ ಅಲ್ಪ ಸಂಖ್ಯಾತರಿಗೆ ಕೊಟ್ಟಿದ್ದು 4,500 ಕೋಟಿ ಮಾತ್ರ. ಇದನ್ನು ಹಲಾಲ್ ಬಜೆಟ್, ಓಲೈಕ್ ಬಜೆಟ್ ಎನ್ನುವ ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ ಎಂದಿದ್ದರು. ಇದಕ್ಕೆ ಸಾಕಷ್ಟು ಕಾಮೆಂಟ್ ಗಳು ಬಂದಿವೆ. ಉರ್ದು ಶಾಲೆಗಳಿಗೆ ಕೊಟ್ಟಿದ್ದು ಓಲೈಕೆ ಅಲ್ಲದೆ ಮತ್ತಿನ್ನೇನು, ನೀವು ಅಲ್ಪಸಂಖ್ಯಾತರು ಎಂದು ಹೇಳಿದರೂ ಅತೀ ಹೆಚ್ಚು ಲಾಭ ಪಡೆಯುವುದು ಮುಸ್ಲಿಮರೇ ಎನ್ನುವುದು ಎಲ್ಲರಿಗೂ ಗೊತ್ತು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ತೆಂಗಿನಕಾಯಿ ಬೆಲೆ ಭಾರೀ ಏರಿಕೆ, ಕಾಯಿಯೂ ಬರ್ತಿಲ್ಲ