Select Your Language

Notifications

webdunia
webdunia
webdunia
webdunia

ಮನಮೋಹನ್ ಸಿಂಗ್ ಕನ್ನಡದವರಾ, ಬೆಂಗಳೂರು ವಿವಿಗೆ ಅವರ ಕೊಡುಗೆ ಏನು: ಆಕ್ರೋಶ

Manamohan Singh

Krishnaveni K

ಬೆಂಗಳೂರು , ಶನಿವಾರ, 8 ಮಾರ್ಚ್ 2025 (08:47 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನಿನ್ನೆ ಮಂಡಿಸಿದ ಕರ್ನಾಟಕ ಬಜೆಟ್ 2025 ರಲ್ಲಿ ಬೆಂಗಳೂರು ವಿವಿಗೆ ಮಾಜಿ ಪ್ರಧಾನಿ ದಿವಂಗತ ಡಾ. ಮನಮೋಹನ್ ಸಿಂಗ್ ಹೆಸರಿಡುವುದಾಗಿ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಮನಮೋಹನ್ ಸಿಂಗ್ ಹೆಸರು ಬೆಂಗಳೂರು ವಿವಿಗೆ ಯಾಕೆ, ಅವರು ಕನ್ನಡದವರಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
 

ಕಾಂಗ್ರೆಸ್ ನಿಂದ ಪ್ರಧಾನಿಯಾಗಿದ್ದ ಡಾ ಮನಮೋಹನ್ ಸಿಂಗ್ ಇತ್ತೀಚೆಗಷ್ಟೇ ನಿಧನರಾಗಿದ್ದರು. ಎರಡು ಬಾರಿ ಸತತವಾಗಿ ಪ್ರಧಾನಿಯಾಗಿದ್ದ ಅವರು ಅರ್ಥಶಾಸ್ತ್ರಜ್ಞ ಮತ್ತು ಉನ್ನತ ವ್ಯಾಸಂಗ ಮಾಡಿದ್ದ ಅಪರೂಪದ ಪ್ರಧಾನಿಯಾಗಿದ್ದರು.

ಅವರ ಸ್ಮರಣಾರ್ಥವಾಗಿ ಈಗ ರಾಜ್ಯ ಸರ್ಕಾರ ಬೆಂಗಳೂರು ವಿವಿಗೆ ಅವರ ಹೆಸರಿಡಲು ನಿರ್ಧಾರ ಮಾಡಿದೆ. ಇದನ್ನು ನಿನ್ನೆ ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ. ಇದಕ್ಕೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದರೆ ಮತ್ತೆ ಕೆಲವರು ಟೀಕೆ ಮಾಡಿದ್ದಾರೆ.

ಈ ಹಿಂದೆ ಯಲಹಂಕ ಮೇಲ್ಸೇತುವೆಗೆ ಬಿಜೆಪಿ ಸರ್ಕಾರ ವೀರ ಸವಾರ್ಕರ್ ಹೆಸರು ನಾಮಕರಣ ಮಾಡಲು ಹೊರಟಾಗ ಕಾಂಗ್ರೆಸ್ ವಿರೋಧಿಸಿತ್ತು. ಕನ್ನಡಿಗ ಸ್ವಾತಂತ್ರ್ಯ ಹೋರಾಟಗಾರರು, ಐತಿಹಾಸಿಕ ವ್ಯಕ್ತಿಗಳು ಯಾರೂ ಇಲ್ವೇ ಎಂದು ಪ್ರಶ್ನೆ ಮಾಡಿತ್ತು. ಹಾಗಿದ್ದರೆ ಈಗ ಬೆಂಗಳೂರು ವಿವಿಗೆ ಮನಮೋಹನ್ ಸಿಂಗ್ ಕೊಡುಗೆ ಏನು? ಅವರು ಕನ್ನಡಿಗರಾ? ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾ ಪ್ರಿಯರಿಗೆ ಗುಡ್‌ನ್ಯೂಸ್‌: ಮಲ್ಟಿಫ್ಲೆಕ್ಸ್‌ಗಳಲ್ಲಿ ಏಕರೂಪ ಟಿಕೆಟ್ ನಿಗದಿ