Webdunia - Bharat's app for daily news and videos

Install App

Kannada Viral Video: ಬೆಂಗಳೂರಲ್ಲಿ ಬದುಕಬೇಕೆಂದರೆ ಹಿಂದಿ ಕಲಿ: ಕನ್ನಡಿಗ ಆಟೋ ಚಾಲಕನಿಗೆ ಹಿಂದಿವಾಲ ಧಮ್ಕಿ

Krishnaveni K
ಶನಿವಾರ, 19 ಏಪ್ರಿಲ್ 2025 (13:27 IST)
Photo Credit: X
ಬೆಂಗಳೂರು: ಕನ್ನಡಿಗ ಆಟೋ ಚಾಲಕನಿಗೆ ಹಿಂದಿಯಲ್ಲಿ ಮಾತನಾಡು ಎಂದು ಹಿಂದಿ ಭಾಷಿಕ ಧಮ್ಕಿ ಹಾಕಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬೆಂಗಳೂರಿನ ಎಸ್ಎಂಎಸ್ ಆರ್ಕೇಡ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಓರ್ವ ಆಟೋ ಚಾಲಕನಿಗೆ ಧಮ್ಕಿ ಹಾಕುತ್ತಿದ್ದರೆ ಅತ್ತ ಆಟೋ ಚಾಲಕನೂ ತಿರುಗೇಟು ನೀಡುತ್ತಿದ್ದಾನೆ. ಇದನ್ನು ಒಬ್ಬಾತ ವಿಡಿಯೋ ಮಾಡುತ್ತಿದ್ದರೆ, ಮತ್ತೊಬ್ಬ ಮಹಿಳೆ ಹಿಂದಿ ಭಾಷಿಕ ಯುವಕನನ್ನು ಹಿಡಿದೆಳೆದು ಅತ್ತ ಕರೆದೊಯ್ದಿದ್ದಾಳೆ.

ಹಿಂದಿಯಲ್ಲಿ ಮಾತನಾಡು ಎಂದು ಯುವಕ ಧಮ್ಕಿ ಹಾಕಿದ್ದಕ್ಕೆ ಆಟೋ ಚಾಲಕ ‘ಏನೂ ಮಾಡಕ್ಕಾಗಲ್ಲ. ಕನ್ನಡ ಮಾತನಾಡು ಕಲಿ ನೀನು. ನೀನು ಬೆಂಗಳೂರಿಗೆ ಬಂದಿರುವುದು ಆಯ್ತಾ..’ ಎಂದು ತಿರುಗೇಟು ಕೊಡುತ್ತಾನೆ.

ಈ ವೇಳೆ ಯುವಕನ ಜೊತೆಗಿದ್ದ ಮಹಿಳೆ ಆತನನ್ನು ಕರೆದೊಯ್ಯುತ್ತಾಳೆ. ನೀನು ಬೆಂಗಳೂರಲ್ಲಿ ಬದುಕಬೇಕೆಂದರೆ ಹಿಂದಿ ಮಾತನಾಡಲು ಕಲಿ ಎಂದು ಯುವಕ ಹೇಳಿದ್ದ. ಇದಕ್ಕೆ ಆಟೋ ಚಾಲಕ ತಿರುಗೇಟು ನೀಡಿದ್ದಾನೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ  ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Caste census: ಜಾತಿಗಣತಿ ಮಾಡಲು ಯಾಕೆ ಕೋಟ್ಯಾಂತರ ರೂಪಾಯಿ ಖರ್ಚಾಗುತ್ತದೆ, ಇಲ್ಲಿದೆ ಸೀಕ್ರೆಟ್

Chinnaswamy stampede: ವಿರಾಟ್ ಕೊಹ್ಲಿ ಸ್ನೇಹಿತನ ಭವಿಷ್ಯ ಇಂದು ನಿರ್ಧಾರ

Funny video: ಗೆಜ್ಜೆ ಕಟ್ಟಿಸಲು ಆಟ ಆಡಿಸಿದ ವಧು, ಕೊನೆಗೆ ಆಗಿದ್ದೇನು

Karnataka Weather: ಎರಡು ದಿನಗಳಿಗೆ ಮಳೆ ಜೋರು, ಈ ಜಿಲ್ಲೆಗಳಿಗೆ ರೆಡ್ ಅಲರ್ಟ್

Indore Raja Raghuvanshi murder: ಇದೊಂದು ಕೆಲಸವಾದ ಮೆಲೆ ಫಸ್ಟ್ ನೈಟ್ ಮಾಡಿಕೊಳ್ಳೋಣ ಎಂದಿದ್ದ ಸೋನಂ

ಮುಂದಿನ ಸುದ್ದಿ
Show comments