Webdunia - Bharat's app for daily news and videos

Install App

Arecanut price today: ಅಡಿಕೆಗೂ ಇಲ್ಲ, ಕಾಳುಮೆಣಸಿಗೂ ಇಲ್ಲ, ಇಂದಿನ ಬೆಲೆ ಎಷ್ಟಾಗಿದೆ ನೋಡಿ

Krishnaveni K
ಶನಿವಾರ, 19 ಏಪ್ರಿಲ್ 2025 (13:10 IST)
ಬೆಂಗಳೂರು: ಕಳೆದ ವಾರ ಕೊನೆಯಲ್ಲಿ ಏರಿಕೆಯಾಗಿದ್ದ ಅಡಿಕೆ ಬೆಲೆ ಈಗ ನಿಂತ ನೀರಾಗಿದೆ. ನಿನ್ನೆಯಿಂದ ಅಡಿಕೆ ಬೆಲೆ ಯಥಾಸ್ಥಿತಿಯಲ್ಲಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು ದರ ಹೇಗಿದೆ ಇಲ್ಲಿದೆ ವಿವರ.

ಅಡಿಕೆಗೆ ಕಳೆದ ಕೆಲವು ದಿನಗಳಿಂದ ಬೆಲೆ ಏರಿಕೆಯಾಗುತ್ತಲೇ ಇತ್ತು. ಹೀಗಾಗಿ ಬೆಳೆಗಾರರೂ ಭಾರೀ ನಿರೀಕ್ಷೆಯಲ್ಲಿದ್ದರು. ಆದರೆ ಈಗ ಕಳೆದ ಎರಡು ದಿನಗಳಿಂದ ಅಡಿಕೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಅಡಿಕೆ ಬೆಲೆ ಏರಿಕೆಯಾಗದೇ ಇದ್ದರೂ ಯಥಾಸ್ಥಿತಿಯಲ್ಲಿದ್ದೇ ಇದೆ. ಇಳಿಕೆಯಂತೂ ಆಗಿಲ್ಲ ಎನ್ನುವುದು ಸಮಾಧಾನಕರ ವಿಷಯ. ಹೊಸ ಅಡಿಕೆಗೆ ಇಂದೂ ಗರಿಷ್ಠ 440 ರೂ. ಗಳಷ್ಟಿದ್ದರೆ, ಹಳೆ ಅಡಿಕೆ ಬೆಲೆ ಗರಿಷ್ಠ 500 ರೂ.ಗಳಷ್ಟಿದೆ. ಇಂದು ಡಬಲ್ ಚೋಲ್ ಬೆಲೆ ಗರಿಷ್ಠ 510 ರೂ.ಗಳಷ್ಟಿದೆ. ಅಡಿಕೆ ಬೆಲೆ ಮೊನ್ನೆಯಿಂದ ಇದೇ ರೀತಿ ಮುಂದುವರಿದಿದೆ.

ಹೊಸ ಫಟೋರ ದರ 345 ರೂ.ಗಳಷ್ಟಾಗಿದೆ. ಹಳೆ ಫಟೋರ ದರ 355 ರೂ. ಗಳಷ್ಟಿದೆ. ಹೊಸ ಉಳ್ಳಿ ದರ ಏರಿಕೆಯಾಗಿ ಗರಿಷ್ಠ 215 ರೂ., ಹಳೆ ಉಳ್ಳಿ ದರ 230 ಗಳಷ್ಟಾಗಿದೆ. ಹೊಸ ಕೋಕ ದರ 290 ರೂ., ಹಳೇ ಕೋಕ 300 ರೂ. ಗಳಷ್ಟೇ ಇದೆ.

ಕಾಳುಮೆಣಸು ದರ
ಕಾಳುಮೆಣಸು ಬೆಳೆಗಾರರಿಗೆ ಕಳೆದ ವಾರ ಸತತವಾಗಿ ಬೆಲೆ ಇಳಿಕೆಯಾಗಿ ನಿರಾಸೆಯಾಗಿತ್ತು. ಆದರೆ ಮೊನ್ನೆ ಕಾಳುಮೆಣಸು ದರ ಏರಿಕೆಯಾಗಿತ್ತು.  ಅದಾದ ಬಳಿಕ ಎರಡು ದಿನಗಳಿಂದ ಕಾಳುಮೆಣಸು ದರದಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ. ಇಂದೂ ಕಾಳುಮೆಣಸು ಗರಿಷ್ಠ ಬೆಲೆ 705 ರೂ.ಗಳಷ್ಟಿದೆ. ಇನ್ನು ಒಣಕೊಬ್ಬರಿ ದರ ಗರಿಷ್ಠ 175 ರೂ.ಗಳಷ್ಟೇ ಇದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಮರನಾಥ ಯಾತ್ರೆ 2025: ಐದು ಬಸ್‌ಗಳು ಪರಸ್ಪರ ಡಿಕ್ಕಿ, 36ಯಾತ್ರಾರ್ಥಿಗಳಿಗೆ ಗಾಯ

ಆರ್ ಎಸ್ಎಸ್ ಬಗ್ಗೆ ಹುಚ್ಚುತನದ ಹೇಳಿಕೆ ನೀಡಿದ್ದಕ್ಕೆ ಕ್ಷಮೆ ಕೇಳಿ: ಯಡಿಯೂರಪ್ಪ

ದ.ಕನ್ನಡ, ಮದುವೆಯಾಗುವುದಾಗಿ ನಂಬಿಸಿ, ತಾಯಿಯಾಗುವಂತೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ವಶಕ್ಕೆ

Arecanut Price: ಅಡಿಕೆ, ಕೊಬ್ಬರಿ ಬೆಲೆ ಇಳಿಕೆ, ಕಾಳುಮೆಣಸು, ಕೊಬ್ಬರಿ ಎಷ್ಟಾಗಿದೆ ನೋಡಿ

ಆಷಾಢ ಶುಕ್ರವಾರ ಮನೆಗೆ ಹೊಸ ಅತಿಥಿ ಬರಮಾಡಿಕೊಂಡ ತೇಜಸ್ವಿ ಸೂರ್ಯ ದಂಪತಿ: ವಿಡಿಯೋ

ಮುಂದಿನ ಸುದ್ದಿ
Show comments