Select Your Language

Notifications

webdunia
webdunia
webdunia
webdunia

ಸುಪ್ರಿತಾಳ ಗಂಡ ಯಾರೆಂದು ಹೇಳದಿರುವ ಲಕ್ಷ್ಮಿ ಬಾರಮ್ಮಗೆ ಹೋಗಿ ಬಾರಮ್ಮ ಎಂದ ನೆಟ್ಟಿಗರು

ಲಕ್ಷ್ಮಿ ಬಾರಮ್ಮ ಸೀರಿಯಲ್

Sampriya

ಬೆಂಗಳೂರು , ಶುಕ್ರವಾರ, 11 ಏಪ್ರಿಲ್ 2025 (16:41 IST)
Photo Courtesy X
ಬೆಂಗಳೂರು: ಕಲರ್ಸ್ ಕನ್ನಡದ ಟಾಪ್‌ ಸೀರಿಯಲ್‌ಗಳಲ್ಲಿ ಒಂದಾಗಿದ್ದ ಲಕ್ಷ್ಮಿ ಬಾರಮ್ಮ ಇದೀಗ ಹೊಸ ಸೀರಿಯಲ್‌ಗಾಗಿ ಅಂತ್ಯವನ್ನು ಹಾಡುತ್ತಿದೆ. ಆರಂಭದಿಂದಲೂ ಒಳ್ಳೆಯ ಕಥೆ ಹಾಗೂ ನೈಜ ಅಭಿನಯದ ಮೂಲಕ ಸೀರಿಯಲ್ ಪ್ರಿಯರ ಮನ ಗೆದ್ದಿದ್ದ ಲಕ್ಷ್ಮಿ ಬಾರಮ್ಮ ಇದೀಗ ಕಾವೇರಿ ಸಾವಿನ ಮೂಲಕ  ಅಂತ್ಯಗೊಳ್ಳುತ್ತಿದೆ.

ಒಳ್ಳೆಯ ಟಿಆರ್‌ಪಿಯೊಂದಿಗೆ ಪ್ರಸಾರಗೊಳ್ಳುತ್ತಿದ್ದ ಲಕ್ಷ್ಮಿ ಬಾರಮ್ಮಗೆ ಈಚೆಗೆ ಭಾರೀ ಟೀಕೆಗಳು ವ್ಯಕ್ತವಾಗಿ, ಟ್ರೋಲ್‌ಗೆ ಒಳಗಾಗಿದೆ. ಇದೀಗ ಸೀರಿಯಲ್ ಅಂತ್ಯಗೊಳ್ಳುತ್ತಿದ್ದರು, ಪ್ರೇಕ್ಷಕರು ಮಾತ್ರ ಸೀರಿಯಲ್‌ನ ಕೊನೆಯ ಸಂಚಿಕೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಸೀರಿಯಲ್‌ನ ಪ್ರಮುಖ ಪಾತ್ರಗಳಲ್ಲಿ ಒಂದಾಗಿದ್ದ ಸುಪ್ರೀತಾಳ ಗಂಡ ಯಾರೆಂದು ಹೇಳದೆ, ಕೀರ್ತಿಯ ಅಪ್ಪನನ್ನು ತೋರಿಸದೆ, ಕೇವಲ ಕಾವೇರಿಯ ಕ್ರೌರ್ಯದ ಬಗ್ಗೆಯೇ ತೋರಿಸಿ, ಇದೀಗ ಅಂತ್ಯಗೊಳ್ಳುತ್ತಿದೆ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ.

ಇಂದು ಕಲರ್ಸ್ ಕನ್ನಡ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ಪ್ರೋಮೋ ವಿಡಿಯೋ ನೋಡಿ, ಲಕ್ಷ್ಮಿ ಬಾರಮ್ಮ, ಒಮ್ಮೆ ಹೋಗಮ್ಮ ಎಂದು ತಮಾಷೆ ಮಾಡಿದ್ದಾರೆ. ಒಟ್ಟಾರೆ ಲಕ್ಷ್ಮಿ ಬಾರಮ್ಮ ಸೀರಿಯಲ್ ನೋಡುವವರಿಗೆ ತಮ್ಮ ನೆಚ್ಚಿನ ಸೀರಿಯಲ್ ಮುಗಿಯುವುದು ಬೇಜಾರು ನೀಡುತ್ತಿದ್ದರೆ, ಮತ್ತೇ ಕೆಲವರು ಸೀರಿಯಲ್ ಮುಗಿಯುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.







Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್‌ ಬಿಡುಗಡೆಗಾಗಿ ಕಟ್ಟಿಕೊಂಡ ಹರಕೆಯನ್ನು ತೀರಿಸಿದ ವಿಜಯಲಕ್ಷ್ಮಿ: ಜಯ, ಸಂಪತ್ತು ಎಲ್ಲ ನಿಮ್ಮ ಹೆಸರಿನಲ್ಲಿದೆ ಎಂದ ಫ್ಯಾನ್ಸ್‌