Select Your Language

Notifications

webdunia
webdunia
webdunia
webdunia

ಟಿಆರ್‌ಪಿಯಲ್ಲಿ ಟಾಪ್‌ನಲ್ಲೇ ಇರುವಾಗಲೇ ಈ ಸೀರಿಯಲ್‌ ಅಂತ್ಯವಾಗಲಿದೆ

Colors Kannada, Lakshmi baramma Serial, Vaishnav Gowda,

Sampriya

ಬೆಂಗಳೂರು , ಶನಿವಾರ, 29 ಮಾರ್ಚ್ 2025 (15:42 IST)
Photo Courtesy X
ಕಲರ್ಸ್ ಕನ್ನಡದ ಟಾಪ್ ಸೀರಿಯಲ್‌ಗಳಲ್ಲಿ ಒಂದಾಗಿರು ಲಕ್ಷ್ಮೀ ಬಾರಮ್ಮ ಶೀಘ್ರದಲ್ಲೇ ಅಂತ್ಯವಾಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಸೀರಿಯಲ್ ಶೂಟಿಂಗ್ ಸೆಟ್‌ನಿಂದ ಹೊರಬಿದ್ದಿರುವ ಒಂದು ಫೋಟೋ.

ಉತ್ತಮ ಟಿಆರ್​ಪಿಯಲ್ಲಿ ಸೀರಿಯಲ್‌ ಪ್ರಸಾರವಾಗುತ್ತಿರುವಾಗಲೇ  ಧಾರಾವಾಹಿಯನ್ನು ಕೊನೆ ಮಾಡಲಾಗುತ್ತಿದೆ. ಈ ವಿಚಾರ ಈ ಧಾರಾವಾಹಿಯ ವೀಕ್ಷಕರಿಗೆ ಬೇಸರ ಮೂಡಿಸಿದೆ. ಇದೀಗ ಈ ಸೀರಿಯಲ್‌ ಸಮಯಕ್ಕೆ ಹೊಸ ಧಾರವಾಹಿ ಬರಲಿದೆ ಎನ್ನಲಾಗಿದೆ.

ಈ ಧಾರಾವಾಹಿಯ ಕೊನೆಯ ದಿನದ ಶೂಟ್ ಫೋಟೋ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾ ಪೇಜ್​ಗಳಲ್ಲಿ ಇದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಪೋಟೋ ನೋಡಿ ಸೀರಿಯಲ್ ಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸೀರಿಯಲ್‌ನಲ್ಲಿ ನಾಯಕನಾಗಿ ಶಮಂತ್ ಬ್ರೋ ಗೌಡ ಹಾಗೂ ನಾಯಕಿಯಾಗಿ ಭೂಮಿಕಾ ರಮೇಶ್‌ ಅವರು ನಟಿಸುತ್ತಿದ್ದಾರೆ.

ಸದ್ಯ ವೈಷ್ಣವ್‌ಗೆ ಆತನ ತಾಯಿ ಕಾವೇರಿ ಎರಡನೇ ಮದುವೆ ಮಾಡಲು ಮುಂದಾಗಿದ್ದಾಳೆ. ಇನ್ನೂ ಸೀರಿಯಲ್‌ ಕೊನೆಯ ಶೂಟಿಂಗ್ ಎಂದು ವೈರಲ್ ಆಗುತ್ತಿರುವ ಪೋಟೋದಲ್ಲಿ ಲಕ್ಷ್ಮಿ ಹಾಗೂ ಕೀರ್ತಿ ಮದುವೆ ಹುಡುಗಿಯಾಗಿ ರೆಡಿಯಾಗಿದ್ದಾಳೆ. ಸೀರಿಯಲ್ ಅಂತ್ಯದ ಬಗ್ಗೆ ಇದುವರೆಗೂ ಸೀರಿಯಲ್ ತಂಡದಿಂದ ಮಾಹಿತಿ ಹೊರಬಿದ್ದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಜೈಲು ಸೇರಿದ್ದಾಗ ವಿಜಯಲಕ್ಷ್ಮಿ ಹೋರಾಟದ ಬಗ್ಗೆ ಧನ್ವೀರ್‌ ಹೀಗಂದ್ರು