ಬೆಂಗಳೂರು: ಕನ್ನಡಿಗ ಆಟೋ ಚಾಲಕನಿಗೆ ಹಿಂದಿಯಲ್ಲಿ ಮಾತನಾಡು ಎಂದು ಹಿಂದಿ ಭಾಷಿಕ ಧಮ್ಕಿ ಹಾಕಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬೆಂಗಳೂರಿನ ಎಸ್ಎಂಎಸ್ ಆರ್ಕೇಡ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಓರ್ವ ಆಟೋ ಚಾಲಕನಿಗೆ ಧಮ್ಕಿ ಹಾಕುತ್ತಿದ್ದರೆ ಅತ್ತ ಆಟೋ ಚಾಲಕನೂ ತಿರುಗೇಟು ನೀಡುತ್ತಿದ್ದಾನೆ. ಇದನ್ನು ಒಬ್ಬಾತ ವಿಡಿಯೋ ಮಾಡುತ್ತಿದ್ದರೆ, ಮತ್ತೊಬ್ಬ ಮಹಿಳೆ ಹಿಂದಿ ಭಾಷಿಕ ಯುವಕನನ್ನು ಹಿಡಿದೆಳೆದು ಅತ್ತ ಕರೆದೊಯ್ದಿದ್ದಾಳೆ.
ಹಿಂದಿಯಲ್ಲಿ ಮಾತನಾಡು ಎಂದು ಯುವಕ ಧಮ್ಕಿ ಹಾಕಿದ್ದಕ್ಕೆ ಆಟೋ ಚಾಲಕ ಏನೂ ಮಾಡಕ್ಕಾಗಲ್ಲ. ಕನ್ನಡ ಮಾತನಾಡು ಕಲಿ ನೀನು. ನೀನು ಬೆಂಗಳೂರಿಗೆ ಬಂದಿರುವುದು ಆಯ್ತಾ.. ಎಂದು ತಿರುಗೇಟು ಕೊಡುತ್ತಾನೆ.
ಈ ವೇಳೆ ಯುವಕನ ಜೊತೆಗಿದ್ದ ಮಹಿಳೆ ಆತನನ್ನು ಕರೆದೊಯ್ಯುತ್ತಾಳೆ. ನೀನು ಬೆಂಗಳೂರಲ್ಲಿ ಬದುಕಬೇಕೆಂದರೆ ಹಿಂದಿ ಮಾತನಾಡಲು ಕಲಿ ಎಂದು ಯುವಕ ಹೇಳಿದ್ದ. ಇದಕ್ಕೆ ಆಟೋ ಚಾಲಕ ತಿರುಗೇಟು ನೀಡಿದ್ದಾನೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.